ADVERTISEMENT

ಇಂದು ಸಂಸತ್‌ ಪ್ರಜಾಪ್ರಭುತ್ವದ ಪ್ರಮುಖ ದಿನ, ವಿಶ್ವಾಸದ ಖಾತ್ರಿಯಿದೆ: ಮೋದಿ 

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 3:20 IST
Last Updated 20 ಜುಲೈ 2018, 3:20 IST
   

ನವದೆಹಲಿ:‘ಇಂದು ನಮ್ಮ ಸಂಸತ್ತಿನ ಪ್ರಜಾಪ್ರಭುತ್ವದ ಪ್ರಮುಖ ದಿನ. ಜನರು ಮತ್ತು ಸಂವಿಧಾನದ ಆಶಯಗಳಿಗೆ ನಾವು ಬದ್ಧರಾಗಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು(ಶುಕ್ರವಾರ) ಮೊದಲ ಅವಿಶ್ವಾಸ ಮತವನ್ನು ಎದುರಿಸಲಿದೆ. ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳು ತಮ್ಮ ಬಲ ಹೆಚ್ಚಿಸಿಕೊಳ್ಳುವ ಕೊನೆಯ ಕ್ಷಣದ ಪ್ರಯತ್ನಗಳನ್ನು ನಡೆಸಿವೆ. ಇದರ ಬೆನ್ನಲ್ಲೇ ಪ್ರಧಾನಿ, ತಮ್ಮ ಸಹವರ್ತಿ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

‘ಇಂದು ನಮ್ಮ ಸಂಸತ್ತಿನ ಪ್ರಜಾಪ್ರಭುತ್ವದ ಪ್ರಮುಖ ದಿನವಾಗಿದೆ. ನನ್ನ ಸಹವರ್ತಿ ಸಂಸದ ಸಹೋದ್ಯೋಗಿಗಳು ಈ ಸಂದರ್ಭದಲ್ಲಿ ರಚನಾತ್ಮಕ, ಸಮಗ್ರ ಮತ್ತು ಮುಕ್ತ ಚರ್ಚೆಯ ಮೂಲಕ ಅಡ್ಡಿಯನ್ನು ತೊಡೆಯುತ್ತಾರೆ ಎಂಬ ಖಾತ್ರಿ ನನಗಿದೆ’ ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ನಮ್ಮ ಸಂವಿಧಾನ ಮತ್ತು ಜನರ ಆಶಯಗಳಿಗೆ ನಾವು ಬದ್ಧರಾಗಿದ್ದೇವೆ. ಇಡೀ ಭಾರತ ನಮ್ಮತ್ತ ದೃಷ್ಟಿ ನೆಟ್ಟಿದೆ ಎಂದು ಹೇಳಿದ್ದಾರೆ.

* ಇದನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.