ADVERTISEMENT

ಇಂದಿನ ದಾಳಿ ನವ ಭಾರತದ ಸಂಕಲ್ಪದ ಮುನ್ನುಡಿ: ಅಮಿತ್‌ ಶಾ

ಏಜೆನ್ಸೀಸ್
Published 26 ಫೆಬ್ರುವರಿ 2019, 9:35 IST
Last Updated 26 ಫೆಬ್ರುವರಿ 2019, 9:35 IST
   

ನವದೆಹಲಿ: ಶೌರ್ಯ ಮತ್ತು ಪರಾಕ್ರಮ ತೋರಿದ ನಮ್ಮ ಸೇನೆಗೆ ಅಭಿನಂದನೆಗಳು ಮತ್ತು ನಮನಗಳು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸುರಕ್ಷಿತ ಮತ್ತು ಸುಭಿಕ್ಷವಾಗಿರುತ್ತದೆ ಎನ್ನುವುದಕ್ಕೆಇಂದಿನದಾಳಿ ನಿದರ್ಶನವಾಗಿದೆ’ ಎಂದು ಅಮಿತ್ ಶಾ ಟ್ವೀಟ್‌ ಮಾಡಿದ್ದಾರೆ.

‘ಇಂದು ನಮ್ಮ ಸೇನೆ ನೀಡಿದ ಕಠಿಣ ದಾಳಿ ಹೊಸ ಭಾರತದ ಸಂಕಲ್ಪ ಮತ್ತು ಬದ್ಧತೆಯನ್ನು ತೋರಿಸುತ್ತದೆ. ನಮ್ಮ ನವ ಭಾರತ ಉಗ್ರರು ಮತ್ತು ಅವರನ್ನು ಪೋಷಿಸುತ್ತಿರುವವರಯಾವ ವರ್ತನೆಯನ್ನು ಸಹಿಸುವುದಿಲ್ಲ’ ಎಂದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಭಾರತೀಯ ಸೇನಾಪಡೆ ಮುಖ್ಯಸ್ಥ ಬಿಪಿನ್‌ ರಾವತ್‌ ಮತ್ತು ವಾಯುಪಡೆ ಮುಖ್ಯಸ್ಥ ಧನೋವಾ ಅವರುಭಾರತೀಯ ವಾಯುಪಡೆ ಜೆಇಎಂ ಉಗ್ರರ ನೆಲೆ ಮೇಲೆ ದಾಳಿ ನಡೆಸಿದ ನಂತರ ಗಡಿಯಲ್ಲಿನ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ಸಂಸದ ಮಲ್ಲಿಕಾರ್ಜುನ ಖರ್ಗೆ, ‘ದೇಶದ ಭದ್ರತೆಗಾಗಿ ನಮ್ಮ ಸೇನೆ ಯಾವ ನಿರ್ಧಾರವನ್ನು ಕೈಗೊಂಡರು ಅದಕ್ಕೆ ನಾವು ಒಮ್ಮತದಿಂದ ಬೆಂಬಲಿಸುತ್ತೇವೆ. ಪಾಕಿಸ್ತಾನದಲ್ಲಿರುವ ಉಗ್ರರಿಗೆ ಅವರು ತಕ್ಕ ಉತ್ತರ ನೀಡಿದ್ದಾರೆ. ಸೇನೆಯನ್ನು ನಾವು ಅಭಿನಂದಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.