ಬಾಹ್ಯಾಕಾಶ ಯಾನದಲ್ಲಿ ಮಹಿಳೆಯರು: ಇಸ್ರೊ, ಮೊದಲ ಅಗ್ನಿವೀರ್ ಅಕ್ಷಯ್ ಸಿಯಾಚಿನ್‌ನಲ್ಲಿ ಸಾವು: ಭಾರತೀಯ ಸೇನೆಯಿಂದ ಶ್ರದ್ಧಾಂಜಲಿ,Telangana Election: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
ಮಾನವಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ದ ಅಡಿಯಲ್ಲಿ, ಯುದ್ಧ ವಿಮಾನ ಚಲಾಯಿಸುವ ಮಹಿಳಾ ಪೈಲಟ್ ಅಥವಾ ಮಹಿಳಾ ವಿಜ್ಞಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಬಾಹ್ಯಾಕಾಶ ಯಾನದಲ್ಲಿ ಮಹಿಳೆಯರು: ಇಸ್ರೊ
ಸಿಯಾಚಿನ್ ಯುದ್ಧ ಭೂಮಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೊದಲ ಅಗ್ನಿವೀರ್ ಗವಟೆ ಅಕ್ಷಯ್ ಲಕ್ಷ್ಮಣ್ ಹುತಾತ್ಮರಾಗಿದ್ದು, ಅವರಿಗೆ ಭಾರತೀಯ ಸೇನೆ ಇಂದು (ಭಾನುವಾರ) ಶ್ರದ್ಧಾಂಜಲಿ ಸಲ್ಲಿಸಿದೆ.
ಈ ಸುದ್ದಿಯನ್ನು ಪೂರ್ಣ ಓದಿ: ಮೊದಲ ಅಗ್ನಿವೀರ್ ಅಕ್ಷಯ್ ಸಿಯಾಚಿನ್‌ನಲ್ಲಿ ಸಾವು: ಭಾರತೀಯ ಸೇನೆಯಿಂದ ಶ್ರದ್ಧಾಂಜಲಿ
ತೆಲಂಗಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಇಂದು (ಭಾನುವಾರ) ಬಿಡುಗಡೆ ಮಾಡಿದೆ. ಬೋತ್ ಕ್ಷೇತ್ರದಿಂದ ಬಿಜೆಪಿ ಸಂಸದ ಸೋಯಂ ಬಾಪು ರಾವ್, ಕೊರಟ್ಲಾ ಕ್ಷೇತ್ರದಿಂದ ಅರವಿಂದ್ ಧರ್ಮಪುರಿ ಹಾಗೂ ಗೋಶಾಮಹಲ್ ಕ್ಷೇತ್ರದಿಂದ ಟಿ. ರಾಜಾ ಸಿಂಗ್ ಸ್ಪರ್ಧಿಸಲಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: Telangana Election: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಇಸ್ರೇಲ್‌ನಲ್ಲಿ ಹಮಾಸ್ ದಾಳಿಯಲ್ಲಿ ಮೃತಪಟ್ಟಿದ್ದ ನೇಪಾಳದ ನಾಲ್ವರು ವಿದ್ಯಾರ್ಥಿಗಳ ಮೃತದೇಹಗಳನ್ನು ಭಾನುವಾರ ಕಠ್ಮಂಡುವಿಗೆ ತರಲಾಗಿದ್ದು, ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಈ ಸುದ್ದಿಯನ್ನು ಪೂರ್ಣ ಓದಿ: Hamas attack: ನಾಲ್ವರು ನೇಪಾಳಿ ವಿದ್ಯಾರ್ಥಿಗಳ ಮೃತದೇಹ ಕಠ್ಮಂಡುವಿಗೆ ರವಾನೆ
ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು.
ಈ ಸುದ್ದಿಯನ್ನು ಪೂರ್ಣ ಓದಿ: ಹೃದಯ ಶಸ್ತ್ರಚಿಕಿತ್ಸೆ: ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ
ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಉಳಿದುಕೊಂಡಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ನಗರ ಪೂರ್ವ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಮಂಗಳೂರು: ವೀಸಾ ಅವಧಿ ಮುಗಿದ ವಿದೇಶಿ ಪ್ರಜೆಗಳು ಪೊಲೀಸರ ವಶಕ್ಕೆ
ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ 274 ರನ್‌ಗಳ ಗೆಲುವಿನ ಗುರಿ ನೀಡಿದೆ. ಇಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ಈ ಸುದ್ದಿಯನ್ನು ಪೂರ್ಣ ಓದಿ: IND vs NZ: ಭಾರತಕ್ಕೆ 274 ರನ್‌ಗಳ ಗೆಲುವಿನ ಗುರಿ ನೀಡಿದ ನ್ಯೂಜಿಲೆಂಡ್
ತೆಲಂಗಾಣ ಶಾಸಕ ಟಿ ರಾಜಾ ಸಿಂಗ್ ಅವರ ಅಮಾನತು ಕ್ರಮವನ್ನು ಬಿಜೆಪಿ ಶಿಸ್ತು ಸಮಿತಿ ಭಾನುವಾರ ಹಿಂಪಡೆದಿದೆ. 2022ರ ಆಗಸ್ಟ್ನಲ್ಲಿ ಅವರನ್ನು ಬಿಜೆಪಿ ಅಮಾನತುಗೊಳಿಸಿತ್ತು. ಪ್ರವಾದಿ ಮಹಮ್ಮದ್‌ರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಿಜೆಪಿ ಪಕ್ಷ ಈ ಕ್ರಮಕೈಗೊಂಡಿತ್ತು.
ಈ ಸುದ್ದಿಯನ್ನು ಪೂರ್ಣ ಓದಿ: ತೆಲಂಗಾಣ ಶಾಸಕ ರಾಜಾ ಸಿಂಗ್ ಅಮಾನತು ಹಿಂಪಡೆದ ಬಿಜೆಪಿ
‘ಕರ್ನಾಟಕದ ‘ನೀರೋ’ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕುಟುಕಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ವಿದ್ಯುತ್ ಕ್ಷಾಮ | ಸಿದ್ದರಾಮಯ್ಯ ಕರ್ನಾಟಕದ 'ನೀರೋ': ಎಚ್.ಡಿ. ಕುಮಾರಸ್ವಾಮಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಿಳಾ ಬಸ್ ಚಾಲಕಿಯರನ್ನು ಉತ್ತೇಜಿಸುವ ಸಲುವಾಗಿ 51 ಬಸ್ಸುಗಳಿಗೆ ಹಸಿರು ನಿಶಾನೆ ತೋರಿ ‘ಮಿಷನ್ ಮಹಿಳಾ ಸಾರಥಿ‘ ಕಾರ್ಯಕ್ರಮವನ್ನು ಉದ್ಟಾಟಿಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಮಿಷನ್ ಮಹಿಳಾ ಸಾರಥಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.