ನವೆಂಬರ್ನಲ್ಲಿ ವರ್ಚ್ಯುವಲ್ ಸಭೆ- ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದ ರೇಣುಕಾಚಾರ್ಯ, ಖಾರ್ಟೂಮ್‌ನ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
ಭಾರತ ಅಧ್ಯಕ್ಷತೆವಹಿಸಿದ್ದ ಎರಡು ದಿನಗಳ ಜಿ20 ಶೃಂಗಸಭೆ ಮುಕ್ತಾಯಗೊಂಡಿದ್ದು, ನವೆಂಬರ್ನಲ್ಲಿ ವರ್ಚ್ಯುವಲ್ ಸಭೆ ನಡೆಯಲಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: G20 Summit | ನವೆಂಬರ್ನಲ್ಲಿ ವರ್ಚ್ಯುವಲ್ ಸಭೆ- ಪ್ರಧಾನಿ ನರೇಂದ್ರ ಮೋದಿ
ಬಿಜೆಪಿಗೆ ಸಾಕಷ್ಟು ಹಾನಿಯಾದ ಬಳಿಕ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಂದೆ ತಂದಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಯಡಿಯೂರಪ್ಪ ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ: ರೇಣುಕಾಚಾರ್ಯ
shabrಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುವ ಹೆಬ್ಬಯಕೆಯಿಂದಾಗಿ ಕೇರಳದ ಚರ್ಚ್‌ವೊಂದರ ಪಾದ್ರಿಯೊಬ್ಬರು ತಮ್ಮ ಚರ್ಚ್ ಸೇವಾ ನಿರ್ವಹಣೆಯ ಪದವಿಯನ್ನು ಹಿಂದಿರುಗಿಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಶಬರಿಮಲೆಗೆ ಭೇಟಿ ನೀಡುವ ಬಯಕೆ: ಪರವಾನಗಿ ಹಿಂದಿರುಗಿಸಿದ ಚರ್ಚ್ ಪಾದ್ರಿ
ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಬ್ರೆಜಿಲ್ ದೇಶಕ್ಕೆ ಹಸ್ತಾಂತರಿಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಮುಂದಿನ ಜಿ20 ಅಧ್ಯಕ್ಷತೆ ಬ್ರೆಜಿಲ್‌ಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ
ದಕ್ಷಿಣ ಖಾರ್ಟೂಮ್‌ನ ಮಾರುಕಟ್ಟೆಯೊಂದರ ಮೇಲೆ ವೈಮಾನಿಕ ದಾಳಿ ನಡೆಸಲಾಗಿದ್ದು ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಖಾರ್ಟೂಮ್: ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ, 40 ಸಾವು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳು ಬರೀ ಶ್ರೀಮಂತರಿಗಷ್ಟೇ ಲಾಭದಾಯಕಯಾಗಿವೆಯೇ ಹೊರತು ಬಡವರಿಗಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಕೇಂದ್ರದ ನೀತಿಯಿಂದ ಶ್ರೀಮಂತರಿಗಷ್ಟೇ ಲಾಭ: ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿರುವ ಸಂವಾದಕ್ಕೆ ನಟ ಪ್ರಕಾಶ್ ರಾಜ್ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿ ಹಿಂದೂ ಜಾಗೃತ ಸೇನೆ ಕಾರ್ಯಕರ್ತರು ಭಾನುವಾರ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಈ ಸುದ್ದಿಯನ್ನು ಪೂರ್ಣ ಓದಿ: ನಟ ಪ್ರಕಾಶ್ ರಾಜ್ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ– ಸಂವಾದಕ್ಕೆ ವಿರೋಧ
ಬೆಂಗಳೂರಿನಲ್ಲಿ ಈಡಿಗ ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ತಮ್ಮ ಪಕ್ಷದ ನಾಯಕರ ವಿರುದ್ಧವೇ ಪರೋಕ್ಷವಾಗಿ ಹೇಳಿಕೆ ನೀಡಿದಂತಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ರಾಜಕೀಯ ಭೂಕಂಪನದ ಮುನ್ಸೂಚನೆ ತೋರುತ್ತಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಶಿವಮೊಗ್ಗದಲ್ಲಿ ಭಾನುವಾರ ಹೇಳಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಬಿ.ಕೆ. ಹರಿಪ್ರಸಾದ್ ಅವರ ಆ ಹೇಳಿಕೆ ರಾಜಕೀಯ ಭೂಕಂಪನದ ಮುನ್ಸೂಚನೆ: ಸಿ.ಟಿ. ರವಿ
ಪುರುಷರ ಗುಂಪೊಂದು ಬುಡಕಟ್ಟು ಮಹಿಳೆಯ ತಲೆ ಕೂದಲನ್ನು ಬೋಳಿಸಿರುವ ಅಮಾನವೀಯ ಘಟನೆ ಬಿಹಾರ್ ರಾಜ್ಯದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಬಿಹಾರದಲ್ಲಿ ಬುಡಕಟ್ಟು ಮಹಿಳೆಯ ತಲೆ ಬೋಳಿಸಿ ವಿಕೃತಿ
‘ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಅತ್ಯಂತ ವಿನಮ್ರ ವ್ಯಕ್ತಿ. ಅವರ ಜೀವನದ ಮೇಲೆ ಅವರ ಅಜ್ಜಿಯು ಅಪಾರ ಪ್ರಭಾವ ಬೀರಿದ್ದಾರೆ’ ಎಂದು ದೆಹಲಿ ಆರ್ಚ್‌ಡಯೋಸಿಸ್ ಪ್ರಾರ್ಥನಾ ಆಯೋಗದ ಕಾರ್ಯದರ್ಶಿ ಫಾದರ್ ನಿಕೋಲಸ್ ಡಯಾಸ್ ಅವರು ಬಣ್ಣಿಸಿದ್ದಾರೆ.
ಈ ಸುದ್ದಿಯನ್ನು ಪೂರ್ಣ ಓದಿ: ಬೈಡನ್ ವಿನಮ್ರ ವ್ಯಕ್ತಿ: ಫಾ. ನಿಕೋಲಸ್ ಡಯಾಸ್ ಬಣ್ಣನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.