ದೆಹಲಿ ಸೇವಾ ನಿಯಂತ್ರಣ ಪ್ರಶ್ನಿಸಿದ್ದ ಪಿಐಎಲ್ ವಜಾ, , ಸೌದಿ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ ಎಂದ ಪ್ರಧಾನಿ ನರೇಂದ್ರ ಮೋದಿ, ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಎದುರು 356 ರನ್ ಗುರಿ ಇರಿಸಿದ ಭಾರತ ಸೇರಿದಂತೆ ಈ ದಿನ Top 10 ಸುದ್ದಿಗಳು ಇಲ್ಲಿವೆ...
ಲೆಫ್ಟಿನೆಂಟ್ ಗವರ್ನರ್ ಅವರಿಗೆ ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣದ ಅಧಿಕಾರ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್, ಸೋಮವಾರ ನಿರಾಕರಿಸಿದೆ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: ದೆಹಲಿ ಸೇವಾ ನಿಯಂತ್ರಣ ಪ್ರಶ್ನಿಸಿದ್ದ ಪಿಐಎಲ್ ವಜಾ
‘ಸೌದಿ ಅರೇಬಿಯಾವು ಭಾರತದ ಪ್ರಮುಖ ಕಾರ್ಯತಂತ್ರದ ವಿಶ್ವಾಸಾರ್ಹ ಪಾಲುದಾರಿಕೆಯ ರಾಷ್ಟ್ರವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: ಸೌದಿ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ
ಏಷ್ಯಾಕಪ್ ಕ್ರಿಕೆಟ್ ಸರಣಿಯ ಭಾರತ–ಪಾಕಿಸ್ತಾನ ನಡುವಿನ ಸೂಪರ್–4 ಹಂತದ ಮೀಸಲು ದಿನದ ಪಂದ್ಯದಲ್ಲಿ ಅದ್ಭುತ ಜತೆಯಾಟ ನಡೆಸಿದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಇಬ್ಬರೂ ಶತಕ ಸಿಡಿಸಿದರು. ಆ ಮೂಲಕ 50 ಓವರ್‌ಗಳಲ್ಲಿ ಭಾರತ 357 ರನ್‌ಗಳ ಗುರಿ ಇರಿಸಿದೆ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: Asia cup: ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಶತಕ ಸಿಡಿಸಿದ K.L.ರಾಹುಲ್, ಕೊಹ್ಲಿ
ಜಿ20 ಶೃಂಗಸಭೆಗೆ ವೇದಿಕೆಯಾಗಿದ್ದ ‘ಭಾರತ ಮಂಟಪಂ’ನಲ್ಲಿ ಮಳೆ ನೀರು ನಿಂತಿರುವ ವಿಡಿಯೊವನ್ನು ಭಾನುವಾರ ‘ಎಕ್ಸ್’ನಲ್ಲಿ ಕಾಂಗ್ರೆಸ್ ಹಂಚಿಕೊಂಡಿದೆ. ಇದು ಮೋದಿ ಸರ್ಕಾರದ ‘ಟೊಳ್ಳು ಅಭಿವೃದ್ಧಿ’ಯನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದೆ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: G20 Summit | ‘ಭಾರತ ಮಂಟಪಂ’ನಲ್ಲಿ ನೀರು: ವಿಡಿಯೊ ಹಂಚಿಕೊಂಡ ಕಾಂಗ್ರೆಸ್
ಜಿ– 20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗವಹಿಸಿದ ಬಳಿಕ ಬೆಂಗಳೂರಿಗೆ ಬಂದಿರುವ ನೆದರ್ಲೆಂಡ್ ಪ್ರಧಾನಿ ಮಾರ್ಕ್ ರುಟ್ಟೆ ಸೋಮವಾರ ಮಧ್ಯಾಹ್ನ ಚರ್ಚ್ ಸ್ಟ್ರೀಟ್‌ಗೆ ಭೇಟಿನೀಡಿ ಚಹಾ ಸವಿದರು.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: ಚರ್ಚ್ ಸ್ಟ್ರೀಟ್‌ನಲ್ಲಿ ಚಹಾ ಸವಿದ ನೆದರ್ಲೆಂಡ್ ಪ್ರಧಾನಿ ಮಾರ್ಕ್ ರುಟ್ಟೆ
‘ನನ್ನ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವವರು ಅದಕ್ಕೂ ಮೊದಲು ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲಿ. ಹಗರಣಗಳಿಂದ ಪಾರಾಗುವ ಸಲುವಾಗಿಯೇ ನನ್ನ ವಿರುದ್ಧ ಕೆಲವರು ಹೇಳಿಕೆ ನೀಡುತ್ತಿದ್ದಾರೆ‘ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: ಹಗರಣಗಳಿಂದ ಪಾರಾಗಲು ನನ್ನ ವಿರುದ್ಧ ಹೇಳಿಕೆ: ಬಿ.ಕೆ. ಹರಿಪ್ರಸಾದ್ ಆರೋಪ
ಆರ್ಥಿಕ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಈಡೇರಿಸುವ ಭರವಸೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದ ಕಾರಣ ರಾಜ್ಯ ಸಾರಿಗೆ ಒಕ್ಕೂಟವು ಮುಷ್ಕರವನ್ನು ಸೋಮವಾರ ಮಧ್ಯಾಹ್ನ ಹಿಂಪಡೆದುಕೊಂಡಿದೆ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: ಸಾರಿಗೆ ಸಚಿವರ ಭರವಸೆ; ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಮುಷ್ಕರ ವಾಪಸ್
ಇಲ್ಲಿನ ‘ವರ್ಲ್ಡ್ ಟ್ರೇಡ್ ಸೆಂಟರ್’ನ ಜೋಡಿ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆಸಿ ಉಗ್ರರು ನಡೆಸಿದ್ದ ಕೃತ್ಯ 9/11 ಎಂದೇ ಇತಿಹಾಸದಲ್ಲಿ ದಾಖಲಾಗಿದೆ. ಅಮೆರಿಕದ ನೆಲದಲ್ಲಿ ನಡೆದಿದ್ದ ಆಘಾತಕಾರಿ ಭಯೋತ್ಪಾದನಾ ದಾಳಿಗೆ ಈಗ 22 ವರ್ಷ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: 9/11ರ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಗೆ 22
ಹಣ ದುರುಪಯೋಗ ಪ್ರಕರಣದಲ್ಲಿ ಬಂಧಿತರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಸೋಮವಾರ ನಸುಕಿನಲ್ಲಿ ಕರೆ ತರಲಾಗಿದೆ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: ರಾಜಮಹೇಂದ್ರವರಂ ಜೈಲಿಗೆ ಚಂದ್ರಬಾಬು ನಾಯ್ಡು: ಝಡ್ ಪ್ಲಸ್ ಭದ್ರತೆ
ಸೂಪರ್ ಸ್ವಾರ್ ರಜನಿಕಾಂತ್ ಅವರು ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಅವರ (ಪ್ರಧಾನಿ) ನಿವಾಸದಲ್ಲಿ ಇಂದು ಭೇಟಿ ಮಾಡಿದ್ದಾರೆ.
ಈ ಸುದ್ದಿ ಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ: ಮಲೇಷಿಯಾ ಪ್ರಧಾನಿ ಭೇಟಿಯಾದ ನಟ ರಜನಿಕಾಂತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.