ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 17 ಆಗಸ್ಟ್ 2023

ಪ್ರಜಾವಾಣಿ ವಿಶೇಷ
Published 17 ಆಗಸ್ಟ್ 2023, 12:44 IST
Last Updated 17 ಆಗಸ್ಟ್ 2023, 12:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ, ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ, ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡ ರೋವರ್ ಹೊತ್ತ ಲ್ಯಾಂಡರ್, ನಟ ಗಣೇಶ್‌ಗೆ ಅರಣ್ಯ ಇಲಾಖೆ ನೋಟಿಸ್‌, ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಬಿಜೆಪಿ ಪ್ರಚಾರದಲ್ಲಿ ಮುಳುಗಿದೆ ಎಂದು ಖರ್ಗೆ ಆರೋಪ ಮಾಡಿರುವ ಸುದ್ದಿ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ

ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

ಬಿಜೆಪಿ
ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ
ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭೆಗಳ ಚುನಾವಣಾ ದಿನಾಂಕ ಪ್ರಕಟವಾಗುವುದಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.

ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ

ಪ್ರಾತಿನಿಧಿಕ ಚಿತ್ರ
ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಧಾರವಾಡ ಹಾಗೂ ಬೀದರ್‌ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ: ನಟ ಗಣೇಶ್‌ಗೆ ಅರಣ್ಯ ಇಲಾಖೆ ನೋಟಿಸ್‌

ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ: ನಟ ಗಣೇಶ್‌ಗೆ ಅರಣ್ಯ ಇಲಾಖೆ ನೋಟಿಸ್‌
ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ವಲಯದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಬೃಹತ್‌ ಕಟ್ಟಡ ಕಟ್ಟುತ್ತಿರುವ ಚಿತ್ರನಟ ಗಣೇಶ್‌ಗೆ ಅರಣ್ಯ ಇಲಾಖೆ ನೋಟಿಸ್‌ ನೀಡಿದೆ. ತಕ್ಷಣವೇ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. 

ರಾಜಸ್ಥಾನ: ಎರಡು ಚುನಾವಣಾ ಸಮಿತಿಗಳಿಂದ ವಸುಂಧರಾ ರಾಜೆ ಅವರನ್ನು ಕೈಬಿಟ್ಟ ಬಿಜೆಪಿ

ವಸುಂಧರಾ ರಾಜೆ 
ರಾಜಸ್ಥಾನ: ಎರಡು ಚುನಾವಣಾ ಸಮಿತಿಗಳಿಂದ ವಸುಂಧರಾ ರಾಜೆ ಅವರನ್ನು ಕೈಬಿಟ್ಟ ಬಿಜೆಪಿ
ಈ ವರ್ಷದ ಅಂತ್ಯಕ್ಕೆ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಎರಡು ಮಹತ್ವದ ಚುನಾವಣಾ ಸಮಿತಿಗಳನ್ನು ರಚಿಸಿ ಗರುವಾರ ಪ್ರಕಟಿಸಿದೆ. ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕಿ ವಸುಂಧರಾ ರಾಜೆ ಅವರನ್ನು ಈ ಎರಡು ಸಮಿತಿಗಳಿಂದ ಕೈಬಿಡಲಾಗಿದೆ.

  ನೈಟ್‌ಕ್ಲಬ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಐಪಿಎಸ್ ಅಧಿಕಾರಿ ಅಮಾನತು

ಸಾಂದರ್ಭಿಕ ಚಿತ್ರ
 ನೈಟ್‌ಕ್ಲಬ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಐಪಿಎಸ್ ಅಧಿಕಾರಿ ಅಮಾನತು
ಗೋವಾದ ನೈಟ್‌ ಕ್ಲಬ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿಯನ್ನು ಕೇಂದ್ರ ಗೃಹ ಇಲಾಖೆ ಅಮಾನತು ಮಾಡಿದೆ.

Chandrayaan-3: ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡ ರೋವರ್ ಹೊತ್ತ ಲ್ಯಾಂಡರ್

Chandrayaan-3
Chandrayaan-3: ನೌಕೆಯಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡ ರೋವರ್ ಹೊತ್ತ ಲ್ಯಾಂಡರ್
ಚಂದ್ರಯಾನ–3 ಯೋಜನೆಯ ಕೊನೆಯ ಹಂತದ ಭಾಗವಾಗಿ ಚಂದ್ರನ ಅಂಗಳದಲ್ಲಿ ಇಳಿಯಲು ನೌಕೆಯಿಂದ ರೋವರ್ ಹೊತ್ತ ಲ್ಯಾಂಡರ್‌ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ಗುರುವಾರ ಯಶಸ್ವಿಯಾಗಿ ನೆರವೇರಿತು’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.

ನಟ ಉಪೇಂದ್ರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆ FIRಗೆ ಹೈಕೋರ್ಟ್ ಮಧ್ಯಂತರ ತಡೆ

ಉಪೇಂದ್ರ, ಹೈಕೋರ್ಟ್
ನಟ ಉಪೇಂದ್ರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆ FIRಗೆ ಹೈಕೋರ್ಟ್ ಮಧ್ಯಂತರ ತಡೆ
ಚಿತ್ರನಟ ಉಪೇಂದ್ರ ವಿರುದ್ಧದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ. ಅವಹೇಳನಕಾರಿ ಪದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಉಪೇಂದ್ರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು.

ಮಣಿಪುರದಲ್ಲಿ ಭೂಕುಸಿತ | ಹೆದ್ದಾರಿ ಬಂದ್; ನಿಂತಲ್ಲೇ ನಿಂತ ಕನಿಷ್ಠ 500 ಟ್ರಕ್

ನಿಂತಲ್ಲೇ ನಿಂತಿರುವ ಟ್ರಕ್‌ಗಳು
ಮಣಿಪುರದಲ್ಲಿ ಭೂಕುಸಿತ | ಹೆದ್ದಾರಿ ಬಂದ್; ನಿಂತಲ್ಲೇ ನಿಂತ ಕನಿಷ್ಠ 500 ಟ್ರಕ್
ಮಣಿಪುರದ ನೊನೇ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಇಂಫಾಲ್‌–ಸಿಲ್ಛಾರ್‌ ಹೆದ್ದಾರಿ ಬಂದ್‌ ಆಗಿದೆ. ಇದರಿಂದಾಗಿ ಕನಿಷ್ಠ 500 ಸರಕು ಸಾಗಣೆಯ ಟ್ರಕ್‌ಗಳು ನಿಂತಲ್ಲೇ ನಿಲ್ಲುವಂತಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಬಿಜೆಪಿ ಪ್ರಚಾರದಲ್ಲಿ ಮುಳುಗಿದೆ: ಖರ್ಗೆ ಆರೋಪ

ಮಲ್ಲಿಕಾರ್ಜುನ ಖರ್ಗೆ
ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಬಿಜೆಪಿ ಪ್ರಚಾರದಲ್ಲಿ ಮುಳುಗಿದೆ: ಖರ್ಗೆ ಆರೋಪ
ಮಣಿಪುರ ಹೊತ್ತಿ ಉರಿಯುತ್ತಿದ್ದರೆ, ಬಿಜೆಪಿ ಮಾತ್ರ ವಿವಿಧ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್‌ ‍ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ

  ವಿಶ್ವಕಪ್‌ ಆರ್ಚರಿ: ಭಾರತ ತಂಡಗಳಿಗೆ ಕಂಚು

ಭಾರತದ ಮಹಿಳಾ ತಂಡ
  ವಿಶ್ವಕಪ್‌ ಆರ್ಚರಿ: ಭಾರತ ತಂಡಗಳಿಗೆ ಕಂಚು
ಭಾರತದ ರೀಕರ್ವ್‌ ಆರ್ಚರಿ ಸ್ಪರ್ಧಿಗಳು ವಿಶ್ವ ಕಪ್‌ ಸ್ಟೇಜ್‌ 4 ಟೂರ್ನಿಯ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಗುರುವಾರ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.