ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಪ‍್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ.
ರಾಹುಲ್ ಅವರು ಬೆಳಿಗ್ಗೆ 7.30 ರಿಂದ 8.30ರೊಳಗೆ ವಾಜಪೇಯಿ ಅವರ ಸ್ಮಾರಕ ‘ಸದೈವ್ ಅಟಲ್’ಗೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಅವರ ಸ್ಮಾರಕಗಳಿಗೂ ಗೌರವ ಅರ್ಪಿಸಲಿದ್ದಾರೆ.
ರಾಹುಲ್ ಅವರು ಶನಿವಾರವೇ ಈ ಸ್ಮಾರಕಗಳಿಗೆ ಭೇಟಿ ನೀಡಬೇಕಿತ್ತು. ಭಾರತ್ ಜೋಡೊ ಯಾತ್ರೆ ತಡವಾಗಿ ಮುಕ್ತಾಯವಾಗಿದ್ದರಿಂದ ಇದು ಸಾಧ್ಯವಾಗಿರಲಿಲ್ಲ.
ರಾಹುಲ್ ಅವರ ನಿರ್ಣಯ ಎಐಸಿಸಿ ಸಂಯೋಜಕ ಗೌರವ್ ಪಾಂಡಿ ಅವರ ಬಣಕ್ಕೆ ಇರುಸು–ಮುರುಸು ಉಂಟುಮಾಡಿದೆ.
‘ಆರ್‌ಎಸ್‌ಎಸ್‌ನ ಇತರ ಸದಸ್ಯರಂತೆ ವಾಜಪೇಯಿ ಕೂಡ ಕ್ವಿಟ್ ಇಂಡಿಯಾ ಚಳವಳಿ ಬಹಿಷ್ಕರಿಸಿದ್ದರು. ಅವರು ಬ್ರಿಟಿಷರ ಮಾಹಿತಿದಾರರಾಗಿ ಕೆಲಸ ಮಾಡಿದ್ದರು. ಬಾಬ್ರಿ ಮಸೀದಿ ಧ್ವಂಸಗೊಳಿಸುವಂತೆ ನಿರ್ದಿಷ್ಟ ಗುಂಪನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು’ ಎಂದು ಗೌರವ್ ಭಾನುವಾರ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.