ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 5 ನವೆಂಬರ್‌ 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2023, 13:21 IST
Last Updated 5 ನವೆಂಬರ್ 2023, 13:21 IST
<div class="paragraphs"><p>ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p></div>

ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

   

ಜಾತಿ ಗಣತಿ ವರದಿಯೇ ನನ್ನ ಕೈಸೇರಿಲ್ಲ, ವಿರೋಧ ಎಂದರೆ ಹೇಗೆ? ಸಿದ್ದರಾಮಯ್ಯ, ಬರ ಪರಿಹಾರ ನೀಡಲು ಹಣ ಇಲ್ಲ ಎಂದು ಭಿಕ್ಷಾ ಪಾತ್ರೆ ಹಿಡಿದುಕೊಳ್ಳಿ: ಸಿ.ಟಿ ರವಿ, ODI: ಜನ್ಮದಿನವೇ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ! ಸೇರಿದಂತೆ ಈ ದಿನ ಪ್ರಮುಖ 10 ಸುದ್ದಿಗಳು ಇಲ್ಲಿವೆ.

ಜಾತಿ ಗಣತಿ ವರದಿಯೇ ನನ್ನ ಕೈಸೇರಿಲ್ಲ, ವಿರೋಧ ಎಂದರೆ ಹೇಗೆ? ಸಿದ್ದರಾಮಯ್ಯ

ಸಿದ್ದರಾಮಯ್ಯ

‘ಕಾಂತರಾಜು ಆಯೋಗದ ವರದಿ (ಜಾತಿ ಗಣತಿ) ನನ್ನ ಕೈಸೇರಿಲ್ಲ. ಆಗಲೇ ಅದಕ್ಕೆ ವಿರೋಧವೆಂದರೆ ನಾನೇನು ಮಾಡಲಿ? ವರದಿಯಲ್ಲಿ ಏನಿದೆ ಏಂಬುದೇ ಗೊತ್ತಿಲ್ಲ. ಅಂಕಿ–ಅಂಶವನ್ನೇ ತಿಳಿಯದೇ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡುವುದು ಹೇಗೆ‌? ಈ ತಿಂಗಳೊಳಗೆ ವರದಿ ಕೊಡಬಹುದೇನೋ. ಸಿಕ್ಕ ನಂತರ ನೋಡೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ADVERTISEMENT

ಬರ ಪರಿಹಾರ ನೀಡಲು ಹಣ ಇಲ್ಲ ಎಂದು ಭಿಕ್ಷಾ ಪಾತ್ರೆ ಹಿಡಿದುಕೊಳ್ಳಿ: ಸಿ.ಟಿ ರವಿ

ಸಿದ್ದರಾಮಯ್ಯ ಹಾಗೂ ಸಿ.ಟಿ. ರವಿ

‘ಬರ ಪರಿಹಾರಕ್ಕೆ ನೀಡಲು ಹಣವಿಲ್ಲ. ನಮಗೆ ಯೋಗ್ಯತೆ ಇಲ್ಲ. ಪಾಪರ್ ಚೀಟಿ ತೆಗೆದುಕೊಂಡಿದ್ದೇವೆ’ ಎಂದು ಭಿಕ್ಷಾ ಪಾತ್ರೆ ಹಿಡಿದುಕೊಳ್ಳಿ. ಆಗ ಅಯ್ಯೊ ಪಾಪ ಎನ್ನುತ್ತಾರೆ’–ಹೀಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಶಿಡ್ಲಘಟ್ಟದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಗಣಿ–ಭೂ ವಿಜ್ಞಾನ ಇಲಾಖೆಯ ಬೆಂಗಳೂರು ಗ್ರಾಮಾಂತರ ಉಪ‌ ನಿರ್ದೇಶಕಿ ಪ್ರತಿಮಾ ಹತ್ಯೆ

ಗಣಿ ಮತ್ತು‌ ಭೂ ವಿಜ್ಞಾನ ಉಪನಿರ್ದೇಶಕಿ ಪ್ರತಿಮಾ

ಗಣಿ ಮತ್ತು‌ ಭೂ ವಿಜ್ಞಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕಿ ಪ್ರತಿಮಾ ಅವರನ್ನು ಶನಿವಾರ ರಾತ್ರಿ‌ ಕೊಲೆ‌ ಮಾಡಲಾಗಿದೆ.

ಶಿವಮೊಗ್ಗದ ಪ್ರತಿಮಾ, ಬೆಂಗಳೂರಿನ ದೊಡ್ಡಕಲ್ಲಸಂದ್ರದ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ 8 ವರ್ಷಗಳಿಂದ ವಾಸವಿದ್ದರು.

2024ರ ಸಾರ್ವತ್ರಿಕ ಚುನಾವಣೆಯಲ್ಲೂ ದೇಶದ ಜನತೆಯಿಂದ ಪೂರ್ಣ ಬೆಂಬಲ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ

ಮುಂಬರುವ 2024ರ ಸಾರ್ವತ್ರಿಕ ಚುನಾವಣೆಯಲ್ಲೂ ದೇಶದ ಜನತೆಯಿಂದ ಬಿಜೆಪಿಗೆ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ICC World Cup: IND vs SA– ದಕ್ಷಿಣ ಆಫ್ರಿಕಾಕ್ಕೆ ಕಠಿಣ ಗುರಿ– ವಿರಾಟ್ ಸೆಂಚುರಿ

ವಿರಾಟ್ ಸೆಂಚುರಿ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಕಠಿಣ ಗುರಿ ನೀಡಿದೆ.

ಗಾಜಾ: ಶಿಬಿರದ ಮೇಲೆ ವಾಯು ದಾಳಿ; 30 ಮಂದಿ ಸಾವು

ಸಾಂದರ್ಭಿಕ ಚಿತ್ರ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ದ ಪ್ರಾರಂಭವಾಗಿ ಇಂದಿಗೆ 29 ದಿನ ಕಳೆದಿದ್ದು, ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ದಾಳಿ ಮುಂದುವರಿದಿದೆ. ಶನಿವಾರ ತಡರಾತ್ರಿ ಸೆಂಟ್ರಲ್ ಗಾಜಾದ ಶಿಬಿರವೊಂದರ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಸುಮಾರು 30 ಮಂದಿ ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

ODI: ಜನ್ಮದಿನವೇ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

ವಿರಾಟ್, ಸಚಿನ್

ಇಂದು ಕೋಲ್ಕತ್ತದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನ ಕೊಹ್ಲಿ ಮಯವಾಗಿತ್ತು. ICC World Cup ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಅವರು ಸೊಗಸಾದ ಪ್ರದರ್ಶನ ನೀಡಿ ಸೆಂಚುರಿ ಸಿಡಿಸಿದರು.

ರಾಮಮಂದಿರ ನಿರ್ಮಾಣ ದೇಶದಲ್ಲಿ ರಾಮರಾಜ್ಯಕ್ಕೆ ನಾಂದಿ: ಸಿಎಂ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ದೇಶದಲ್ಲಿ ರಾಮರಾಜ್ಯಕ್ಕೆ ನಾಂದಿಯಾಗಲಿದೆ. ಅಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಇರುವುದಿಲ್ಲ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಒತ್ತೆಯಾಳುಗಳ ಬಿಡುಗಡೆಗೆ ಹೆಚ್ಚಿದ ಒತ್ತಡ; ಸೇನಾ ಕಚೇರಿ ಮುಂದೆ ಪ್ರತಿಭಟನೆ

ಒತ್ತೆಯಾಳುಗಳ ಬಿಡುಗಡೆಗೆ ಹೆಚ್ಚಿದ ಒತ್ತಡ

ಹಮಾಸ್ ಬಂಡುಕೋರರಿಂದ ಬಂಧಿತರಾಗಿರುವ ಒತ್ತೆಯಾಳುಗಳ ಬಿಡುಗಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಶನಿವಾರ ರಾತ್ರಿ ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಮುಂದೆ ಒತ್ತೆಯಾಳುಗಳ ಕುಟುಂಬ ಸದಸ್ಯರು ಸೇರಿದಂತೆ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ.

Tiger 3: ನವೆಂಬರ್ 12ರಂದು ಟೈಗರ್​ 3 ಬಿಡುಗಡೆ– ಮುಂಗಡ ಬುಕಿಂಗ್ ಆರಂಭ

ಟೈಗರ್​ 3 ಚಿತ್ರದ ಮುಂಗಡ ಬುಕಿಂಗ್ ಆರಂಭ

ಬಹುನಿರೀಕ್ಷಿತ ಸಿನಿಮಾಗಳು ತೆರೆಕಾಣುವಾಗ ಅದಕ್ಕೆ ತಕ್ಕನಾದ ಸಿದ್ಧತೆ ಅಗತ್ಯ. ಈ ವಿಚಾರದಲ್ಲಿ ‘ಟೈಗರ್​ 3’ ಚಿತ್ರದ ನಿರ್ದೇಶಕ ಮನೀಶ್​ ಶರ್ಮಾ ಕೂಡ ಹಿಂದೆ ಬಿದ್ದಿಲ್ಲ. ಸಾಕಷ್ಟು ಪ್ರಚಾರದೊಂದಿಗೆ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಈಗ ಚಿತ್ರತಂಡ ಇಂದಿನಿಂದ (ಭಾನುವಾರ) ‌‌ಮುಂಗಡ ಬುಕಿಂಗ್​ ಆರಂಭಿಸಿದ್ದು, ಭರ್ಜರಿ ಓಪನಿಂಗ್​ ಪಡೆಯುವ ಸೂಚನೆ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.