ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ಗುಜರಾತ್‌ಗಳಲ್ಲಿ ಮಳೆ ಬಿಡುವು ಕೊಟ್ಟಿದೆ. ಇದೇ ವೇಳೆ ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಮುಂಗಾರು ತೀವ್ರತೆ ಪಡೆದುಕೊಂಡಿದೆ. ಪ್ರವಾಹದ ಸ್ಥಿತಿ ತಲೆದೋರಿರುವುದರಿಂದ ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ
* ಭಾರಿ ಮಳೆಯ ಕಾರಣ ಯಮುನಾ ಮತ್ತು ಸಟ್ಲೆಜ್ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಯಮುನಾ ನದಿಯು ದೆಹಲಿಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿಯ ಇಕ್ಕೆಲದ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ
* ಸಟ್ಲೆಜ್ ನದಿಯ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ನದಿ ಹರಿದುಹೋಗುವ ಪಂಜಾಬ್‌ನ ಹಲವು ಭಾಗದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಬಾಕ್ರಾ ಜಲಾಶಯವು ಭರ್ತಿಯಾಗಿದೆ. ಜಲಾಶಯದಿಂದ ನೀರನ್ನು ಹೊರಗೆ ಬಿಡುತ್ತಿರುವುದೂ ಪ್ರವಾಹಕ್ಕೆ ಕಾರಣವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 72 ಗಂಟೆಗಳವರೆಗೆ ‘ರೆಡ್ ಅಲರ್ಟ್’ ಜಾರಿಯಲ್ಲಿರಲಿದೆ
* ಹಿಮಾಚಲ ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ. ರಾಜ್ಯದಲ್ಲಿ ಎಂಟು ಕಡೆ ಭೂಕುಸಿತ ಸಂಭವಿಸಿದೆ. ಮಳೆ ಸಂಬಂಧಿ ಅವಘಡದಲ್ಲಿ 17 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ
* ಆಂಧ್ರಪ್ರದೇಶದ ಕೃಷ್ಣಾ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಮಳೆ ಬಿರುಸು ಪಡೆದಿದೆ. ಕೃಷ್ಣಾ ನದಿಯಲ್ಲಿ ಹರಿವು ಕಡಿಮೆಯಾಗಿತ್ತಾದರೂ, ಮಳೆಯ ಕಾರಣ ಮತ್ತೆ ಹರಿವು ಹೆಚ್ಚಾಗಿದೆ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿಶನಿವಾರವೂ ಪ್ರವಾಹದ ಸ್ಥಿತಿ ಮುಂದುವರಿದಿದೆ. ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ಬಾಲಕಿಯ ಶವವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಪತ್ತೆ ಮಾಡಿದ್ದಾರೆ
ರಾಜಸ್ಥಾನದಲ್ಲಿ ಬಿರುಸು ಮಳೆ
* ರಾಜಸ್ಥಾನದ ಕೋಟಾ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕೆಲವೆಡೆ ಶನಿವಾರದಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದ ಸ್ಥಿತಿ ತಲೆದೋರಿದೆ
* ನೂರಾರು ಜನರನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ. ಯಾವುದೇ ಸ್ಥಿತಿಯನ್ನು ಎದುರಿಸಲು ಸೇನೆಯ ತುಕಡಿಗಳನ್ನು ಸನ್ನಧವಾಗಿ ಇರಿಸಲಾಗಿದೆ
**
137 ಎಂ.ಎಂ.-ಮೌಂಟ್ ಅಬುವಿನಲ್ಲಿದಾಖಲಾದ ಮಳೆ
104.5 ಎಂ.ಎಂ. - ಅಜ್ಮೀರ್‌ನಲ್ಲಿ ದಾಖಲಾದ ಮಳೆ
88.2 ಎಂ.ಎಂ. - ಜೋಧಪುರದಲ್ಲಿದಾಖಲಾದ ಮಳೆ
ಕೇರಳದಲ್ಲಿ ಇಳಿದ ಪ್ರವಾಹ
113 -ಕೇರಳದಲ್ಲಿ ಈವರೆಗೆ ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾದವರು
32 - ಮಲ್ಲಪ್ಪುರಂ ಮತ್ತು ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತಗಳಲ್ಲಿ ನಾಪತ್ತೆಯಾಗಿರುವವರ ಸಂಖ್ಯೆ
805 -ನಿರಾಶ್ರಿತರ ಶಿಬಿರಗಳ ಸಂಖ್ಯೆ
1.29 ಲಕ್ಷ - ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ ಸಂಖ್ಯೆ
* ಕೇರಳದಲ್ಲಿ ಪ್ರವಾಹ ಇಳಿಯುತ್ತಿದೆ. ನಿರಾಶ್ರಿತ ಶಿಬಿರಗಳಿಂದ ಜನರು ತಮ್ಮ ಮನೆಗೆ ವಾಪಸ್ ಹೋಗುತ್ತಿದ್ದಾರೆ
* ಪ್ರವಾಹದ ನೀರು ಮತ್ತು ಕೆಸರಿನಿಂದ ಆವೃತವಾಗಿರುವ ಮನೆಗಳನ್ನು ಸ್ವಚ್ಛಗೊಳಿಸಲು ಜನರು ಮುಂದಾಗಿದ್ದಾರೆ. ಸ್ವಯಂಸೇವಕರು ಈ ಕೆಲಸದಲ್ಲಿ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ
* ಮಲ್ಲಪ್ಪುರಂ ಮತ್ತು ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದಲ್ಲಿ ಸಿಲುಕಿರುವವರ ಶವಗಳಿಗಾಗಿ ಇನ್ನೂ ಶೋಧಕಾರ್ಯ ಮುಂದುವರಿದಿದೆ. ಮಣ್ಣಿನಡಿಯಲ್ಲಿರುವ ದೇಹವನ್ನು ಪತ್ತೆ ಮಾಡುವ ವಿಶಿಷ್ಟ ಸಾಧನವನ್ನು ಹೈದರಾಬಾದ್‌ನಿಂದ ತರಿಸಲಾಗಿದ್ದು, ಶೋಧಕಾರ್ಯ ಚುರುಕು ಪಡೆದಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.