ADVERTISEMENT

ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ಆಗುತ್ತಿರುವುದನ್ನು ಕೇಂದ್ರ ‍ಪ್ರವಾಸೋದ್ಯಮ ಇಲಾಖೆ ಬಹಿರಂಗಗೊಳಿಸಿದೆ.

ಪಿಟಿಐ
Published 26 ನವೆಂಬರ್ 2024, 4:05 IST
Last Updated 26 ನವೆಂಬರ್ 2024, 4:05 IST
<div class="paragraphs"><p>ವಿದೇಶಿ ಜೋಡಿ</p></div>

ವಿದೇಶಿ ಜೋಡಿ

   

ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ಆಗುತ್ತಿರುವುದನ್ನು ಕೇಂದ್ರ ‍ಪ್ರವಾಸೋದ್ಯಮ ಇಲಾಖೆ ಬಹಿರಂಗಗೊಳಿಸಿದೆ.

2023 ರಲ್ಲಿ 95.2 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಲೋಕಸಭೆಗೆ ನೀಡಿದ ಲಿಖಿತ ಮಾಹಿತಿಯಲ್ಲಿ ತಿಳಿಸಿದ್ದಾರೆ.

ADVERTISEMENT

2022 ರಲ್ಲಿ 72.1 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು.

ಅಲ್ಲದೇ ದೇಶದ ಜಿಡಿಪಿಗೂ ಪ್ರವಾಸೋಧ್ಯಮ ಗಮನಾರ್ಹ ಕೊಡುಗೆ ನೀಡುತ್ತಿದೆ. ಭಾರತೀಯ ಪ್ರವಾಸೋದ್ಯಮವು ಜಿಡಿಪಿಗೆ ಶೇ 5 ರಷ್ಟು ಕೊಡುಗೆ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಇದರ ಪ್ರಮಾಣ 2020–21 ರಲ್ಲಿ ಶೇ 1.50, 2021–22 ರಲ್ಲಿ ಶೇ 1.75 ರಷ್ಟಿತ್ತು ಎಂದು ತಿಳಿಸಿದ್ದಾರೆ.

ಅಲ್ಲದೇ ವೈದ್ಯಕೀಯ ಚಿಕಿತ್ಸೆಗಳಿಗಾಗಿ ವಿದೇಶದಿಂದ ಭಾರತಕ್ಕೆ ಆಗಮಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅಂತಹವರ ಅನುಕೂಲಕ್ಕೆ ನೀಡುವ ಮೆಡಿಕಲ್ ವೀಸಾ ಸೌಲಭ್ಯವನ್ನು 167 ದೇಶಗಳಿಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ವಿಮಾನಯಾನ ದರದಲ್ಲಿನ ಹೆಚ್ಚಳದಿಂದ ದೇಶಿಯ ಪ್ರವಾಸೋದ್ಯಮದ ಮೇಲೆ ಏನಾದರೂ ಪರಿಣಾಮ ಬೀರಿರುವ ಬಗ್ಗೆ ಇಲಾಖೆ ಅಧ್ಯಯನ ನಡೆಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಇಲಾಖೆಯಿಂದ ಅಂತಹ ಯಾವುದೇ ಅಧ್ಯಯನ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.