ಪಣಜಿ: ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾದ ದೂದ್‌ಸಾಗರ್ ಜಲಪಾತಕ್ಕೆ ಹೊರಟಿದ್ದ ನೂರಾರು ಪ್ರವಾಸಿಗರನ್ನು ಗೋವಾ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ದಾರಿಮಧ್ಯೆ ತಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಇಲ್ಲಿಯ ಸಾಂಗೇಮ್ ತಾಲೂಕಿನ ಮೈನಾಪಿ ಜಲಪಾತದಲ್ಲಿ ಇಬ್ಬರು ಮುಳುಗಿದ್ದ ಕಾರಣ ಗೋವಾ ಸರ್ಕಾರ ಕಳೆದ ವಾರ ದೂದ್ ಸಾಗರ್ ಜಲಪಾತಕ್ಕೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಿತ್ತು.
ಘಟನೆಯ ಬಳಿಕ ನೈರುತ್ಯ ರೈಲ್ವೆ ಇಲಾಖೆಯು ರೈಲು ಹಳಿಯ ಮೇಲೆ ನಡೆಯದಂತೆ ಒತ್ತಾಯಿಸಿ ಟ್ವೀಟ್ ಮಾಡಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 147, 159 ಪ್ರಕಾರ ಹಳಿಗಳ ಮೇಲೆ ನಡೆಯುವುದು ಅಪರಾಧವಾಗಿದೆ. ಇದು ಸುರಕ್ಷಿತ ಕೂಡ ಅಲ್ಲ ಎಂದು ಹೇಳಿದೆ.
ದೂದ್ ಸಾಗರ್ ಜಲಪಾತವು ಗೋವಾ ಕರ್ನಾಟಕ ಗಡಿ ಭಾಗದಲ್ಲಿದೆ. ಕೊಲ್ಲಮ್ ರೈಲು ನಿಲ್ದಾಣದಲ್ಲಿ ಇಳಿದು ನೂರಾರು ಪ್ರವಾಸಿಗರು ನೈರುತ್ಯ ರೈಲ್ವೆ ಲೈನ್‌ನ ಹಳಿಯ ಮೇಲೆ ನಡೆದು ಸಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.