ಮುಂಬೈ: ಕರ್ಪೂರ ಉತ್ಪನ್ನವನ್ನು ಮಾರಾಟ ಮಾಡದಂತೆ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪನಿಗೆ ಬಾಂಬೆ ಹೈಕೋರ್ಟ್ ಸೋಮವಾರ ಕಂಪನಿಗೆ ₹4 ಕೋಟಿ ದಂಡ ವಿಧಿಸಿದೆ.
ಪತಂಜಲಿ ಕಂಪನಿಯು ಕರ್ಪೂರ ಉತ್ಪನ್ನಗಳ ಮಾರಾಟಕ್ಕೆ ನಮ್ಮ ಕಂಪನಿಯ ಟ್ರೇಡ್‌ಮಾರ್ಕ್ ಅನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಮಂಗಳಂ ಆರ್ಗಾನಿಕ್ಸ್ ಕಂಪನಿಯು ಹೈಕೋರ್ಟ್‌ನ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕರ್ಪೂರ ಉತ್ಪನ್ನ ಮಾರಾಟ ಮಾಡದಂತೆ 2023ರಲ್ಲಿ ಪತಂಜಲಿಗೆ ನಿರ್ಬಂಧ ವಿಧಿಸಿತ್ತು.
ನ್ಯಾಯಮೂರ್ತಿ ಆರ್.ಐ ಛಾಗಲಾ ಅವರು, ‘ಪತಂಜಲಿಯು ಉದ್ದೇಶಪೂರ್ವಕವಾಗಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ’ ಎಂದು ಹೇಳಿದರು.
‘ಕಂಪನಿಗೆ ಕೋರ್ಟ್ ಆದೇಶವನ್ನು ಗಾಳಿಗೆ ತೂರುವ ಉದ್ದೇಶ ಇತ್ತು ಎಂಬುದರಲ್ಲಿ ಸಂದೇಹವೇ ಇಲ್ಲ’ ಎಂದು ಹೇಳಿದರು. ನಂತರ ಎರಡು ವಾರಗಳ ಒಳಗಾಗಿ ₹4 ಕೋಟಿ ಠೇವಣಿ ಇಡುವಂತೆ ಸೂಚಿಸಿದರು.
ಇದಕ್ಕೂ ಮುನ್ನ, ಟ್ರೇಡ್‌ಮಾರ್ಕ್ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ₹50 ಲಕ್ಷ ಮೊತ್ತವನ್ನು ಠೇವಣಿ ಇಡುವಂತೆ ನ್ಯಾಯಾಲಯವು ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.