ನವದೆಹಲಿ: 2020ರ ಡಿಸೆಂಬರ್ 31ರವರೆಗೂಮೊಬೈಲ್ ಅಂತರ್ ಸಂಪರ್ಕ ಬಳಕೆ ಶುಲ್ಕದಲ್ಲಿ (ಐಯುಸಿ) ಯಾವುದೇ ಬದಲಾವಣೆ ಆಗುವುದಿಲ್ಲ. ಪ್ರತಿ ನಿಮಿಷಕ್ಕೆ ಈಗಿರುವ 6 ಪೈಸೆಯೇ ಇರಲಿದೆ.
ಒಂದು ನೆಟ್‌ವರ್ಕ್‌ನಿಂದ ಬೇರೆ ನೆಟ್‌ವರ್ಕ್‌ಗೆ ಮಾಡುವ ಕರೆಗಳಿಗೆ ‘ಐಯುಸಿ’ ವಿಧಿಸಲಾಗುತ್ತಿದೆ. ಇದನ್ನು ಕಂಪನಿಗಳೇ ಭರಿಸುತ್ತಿವೆ. ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಮೊಬೈಲ್ ಕಂಪನಿಗಳ ನಷ್ಟಕ್ಕೆ ತಡೆ ಬೀಳಲಿದೆ.
2021ರ ಜನವರಿ 1 ರಿಂದ ಶುಲ್ಕವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗುವುದು ಎಂದು ‘ಟ್ರಾಯ್’ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.