ADVERTISEMENT

ಮಳೆಯಿಂದಾಗಿ ಸ್ಥಗಿತಗೊಂಡಿದ್ದ ರೈಲು, ಕೆಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 14:48 IST
Last Updated 11 ಆಗಸ್ಟ್ 2019, 14:48 IST
   

ತಿರುವನಂತಪುರಂ: ಕೇರಳದಲ್ಲಿ ಮಳೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ರೈಲು ಮತ್ತು ಕೆಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭಗೊಂಡಿದೆ.ಮಳೆ ಕಡಿಮೆಯಾಗಿದ್ದರಿಂದ ಭಾನುವಾರ ಬೆಳಗ್ಗೆ 11 ಗಂಟೆಗೆ ಶೊರ್ನೂರ್- ಪಾಲಕ್ಕಾಡ್ ದಾರಿಯಾಗಿ ಸಂಚರಿಸುವ ರೈಲು ಪ್ರಯಾಣ ಆರಂಭಿಸಿದೆ. ಎರ್ನಾಕುಳಂ-ಬೆಂಗಳೂರು, ನ್ಯೂಡೆಲ್ಲಿ - ಕೇರಳ, ತಿರುವನಂತಪುರಂ-ಗುವಾಹಟಿ ಎಕ್ಸ್‌ಪ್ರೆಸ್ ಈ ದಾರಿಯಾಗಿ ಸಂಚರಿಸುತ್ತಿವೆ.

ಈ ಹಿಂದೆ ರದ್ದಾಗಿದ್ದ ಎರ್ನಾಕುಳಂ - ಬಾಣಸವಾಡಿ ಎಕ್ಸ್‌ಪ್ರೆಸ್ 4.50ಕ್ಕೆ ಹೊರಟಿದ್ದು, 2.45ಕ್ಕೆ ಹೊರಟ ಜನ ಶತಾಬ್ದಿ ಶೊರ್ನೂರ್‌ ವರೆಗೆಸಂಚರಿಸಲಿದೆ.ಚೆನ್ನೈ ಮೇಲ್ 2.55ಕ್ಕೆ, ಶಾಲಿಮಾರ್ ಎಕ್ಸ್‌ಪ್ರೆಸ್4 ಗಂಟೆಗೆ, ಕೊಚ್ಚುವೇಲಿ- ಬೆಂಗಳೂರು ಎಕ್ಸ್‌ಪ್ರೆಸ್ 4.45ಕ್ಕೆ ಹೊರಟಿದೆ.ಪಾಲಕ್ಕಾಡ್ ದಾರಿಯಾಗಿ ಕೇರಳಕ್ಕಿರುವ ರೈಲು ಸಂಚಾರ ಪುನರಾರಂಭಿಸಲಾಗಿದೆ.

ಶೆರ್ನೂರ್ -ಕೋಯಿಕ್ಕೋಡ್ ದಾರಿಯಾಗಿ ಸಾಗುವ ರೈಲುಗಳು ಮೂರನೇ ದಿನವೂ ಸ್ಥಗಿತಗೊಂಡಿದೆ.ಭಾನುವಾರ 26 ಬಹುದೂರ ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಲಾಗಿದೆ. ಕಲ್ಲಾಯಿ , ಫರೂಕ್ ಸೇತುವೆಗಳನ್ನು ರೈಲ್ವೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.ಈ ಸೇತುವೆಗಳು ಅಪಾಯದಲ್ಲಿರುವ ಕಾರಣ ರೈಲು ಸಂಚಾರಕ್ಕೆ ಅನುಮತಿ ನೀಡಿಲ್ಲ.

ADVERTISEMENT

ಬೆಳಗ್ಗೆ ಹೈದರಾಬಾದ್- ಶಬರಿ ಎಕ್ಸ್‌ಪ್ರೆಸ್, ಮುಂಬೈ ಜಯಂತಿ ಜನತಾ ರೈಲನ್ನು ನಾಗರಕೋವಿಲ್ ಮೂಲಕ ವಾಪಸ್ ಕಳುಹಿಸಲಾಗಿದೆ.

ಕೊಚ್ಚುವೇಳಿ- ಫೋರ್‌ ಬಂದರ್, ಬೆಂಗಳೂರು ಐಲ್ಯಾಂಡ್, ಮುಂಬೈ ನೇತ್ರಾವತಿ ಎಕ್ಸ್‌ಪ್ರೆಸ್ ರದ್ದು ಮಾಡಲಾಗಿದೆ.

ಸಂಜೆ ತಿರುವನಂತಪುರಂದಿಂದ ಹೊರಡುವ ಮಾವೇಲಿ, ಮಲಬಾರ್ ಮತ್ತು ಮಂಗಳೂರು ಎಕ್ಸ್‌ಪ್ರೆಸ್ ರದ್ದಾಗಿದೆ. 12 ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಲಾಗಿದೆ. ತಿರುವನಂತಪುರಂ ಎರ್ನಾಕುಳಂ ತ್ರಿಶ್ಶೂರ್ ದಾರಿಯಾಗಿ ವಿಶೇಷ ರೈಲುಗಳು ಸಂಚಾರ ನಡೆಸುಚ್ಚಿವೆ, ಎರ್ನಾಕುಳಂ- ಚೆನ್ನೈ, ಎರ್ನಾಕುಳಂ -ವಿಶಾಖಪಟ್ಟಣ ಪ್ಯಾಸೆಂಜರ್ ರೈಲುಗಳು ಸಂಚಾರ ನಡೆಸಲಿವೆ, ಭಾಗಶಃ ರದ್ದು ಮಾಡಿದ್ದ ತಿರುವನಂತಪುರಂ- ಕೋರ್ಬ ಸೋಮವಾರ ತಿರುವನಂತಪುರಂನಿಂದ ಹೊರಡಲಿದೆ,
ರೈಲ್ವೆ ಸಹಾಯವಾಣಿ- 1072, 188293595, 9188292595

ಕೆಎಸ್ಆರ್‌ಟಿಸಿ ಸೇವೆ ಆರಂಭ
ಮಳೆ ನೀರು ಕಡಿಮೆಯಾಗುತ್ತಿದ್ದಂತೆ ಮಲಬಾರ್ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಸೇವೆ ಪುನರಾರಂಭಿಸಿದೆ, ಕೋಯಿಕ್ಕೋಡ್- ಪಾಲಕ್ಕಾಡ್ ನಡುವೆ ಎಂದಿನಂತೆ ಬಸ್ ಸಂಚರಿಸುತ್ತಿದೆ, ತಾಮರಶ್ಶೇರಿ ಘಾಟಿ ದಾರಿಯಾಾಗಿ ಬತ್ತೇರಿ- ಕೋಯಿಕ್ಕೋಡ್ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತಿದೆ, ಮೈಸೂರು- ಕೋಯಿಕ್ಕೋಡ್ ರಾಷ್ಟ್ರೀಯ ಹೆದ್ದಾರಿ 766ರಲ್ಲಿಯೂ ವಾಹನಗಳು ಓಡಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.