ADVERTISEMENT

ಹಳಿ ಮೇಲೆ ಸಿಲಿಂಡರ್‌ | ಮಹತ್ವದ ಸುಳಿವು ಲಭ್ಯ: ರೈಲ್ವೆ ಅಧಿಕಾರಿ

ಪಿಟಿಐ
Published 11 ಸೆಪ್ಟೆಂಬರ್ 2024, 13:55 IST
Last Updated 11 ಸೆಪ್ಟೆಂಬರ್ 2024, 13:55 IST
<div class="paragraphs"><p>ರೈಲು ಡಿಕ್ಕಿ ಹೊಡೆದ ಪರಿಣಾಮ ದೂರದಲ್ಲಿ ಬಿದ್ದಿದ್ದ ಎಲ್‌ಪಿಸಿ ಸಿಲಿಂಡರ್‌ ಅನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಭಾನುವಾರ ರಾತ್ರಿ ತಪಾಸಣೆ ನಡೆಸಿದರು</p></div>

ರೈಲು ಡಿಕ್ಕಿ ಹೊಡೆದ ಪರಿಣಾಮ ದೂರದಲ್ಲಿ ಬಿದ್ದಿದ್ದ ಎಲ್‌ಪಿಸಿ ಸಿಲಿಂಡರ್‌ ಅನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಭಾನುವಾರ ರಾತ್ರಿ ತಪಾಸಣೆ ನಡೆಸಿದರು

   

–ಪಿಟಿಐ ಚಿತ್ರ

ಕಾನ್ಪುರ: ‘ಹಳಿಯ ಮೇಲೆ ಸಿಲಿಂಡರ್‌ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ನಮಗೆ ಮಹತ್ವದ ಸುಳಿವೊಂದು ದೊರೆತಿದೆ. ಕೆಲವೇ ದಿನಗಳಲ್ಲಿ ತನಿಖೆ ಪೂರ್ಣಗೊಳಿಸಲಾಗುವುದು’ ಎಂದು ಹೆಚ್ಚುವರಿ ಮಹಾನಿರ್ದೇಶಕ (ರೈಲ್ವೆ) ಪ್ರಕಾಶ್‌ ಡಿ. ಬುಧವಾರ ಮಾಹಿತಿ ನೀಡಿದರು.

ADVERTISEMENT

‘ಘಟನೆ ಸಂಬಂಧ ಸೋಮವಾರ ರಾತ್ರಿ ಸುಮಾರು 24ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು, ಮಂಗಳವಾರ ಬೆಳಿಗ್ಗೆ ಬಿಟ್ಟುಕಳುಹಿಸಲಾಗಿದೆ. ಒಂದೇ ಕುಟುಂಬದ ಮೂವರು ಹಾಗೂ ಪಶ್ಚಿಮ ಬಂಗಾಳದಿಂದ ಇತ್ತೀಚೆಗೆ ಕಾನ್ಪುರಕ್ಕೆ ಬಂದಿದ್ದ ಯುವಕನೊಬ್ಬನನ್ನೂ ವಶಕ್ಕೆ ಪಡೆಯಲಾಗಿತ್ತು. ಅಪರಾಧ ಹಿನ್ನೆಲೆ ಇರುವವರನ್ನೇ ತನಿಖೆಗೆ ಒಳಪಡಿಸಲಾಗುತ್ತಿದೆ’ ಎಂದು ಪೊಲೀಸರು ವಿವರಿಸಿದರು.

ವಿವಿಧ ಏಜೆನ್ಸಿಗಳು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಘಟನೆಯಲ್ಲಿ ಭಯೋತ್ಪಾದಕರ ಕೈವಾಡವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ, ಹೆಸರು ಹೇಳಲು ಇಚ್ಛಿಸದ ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಮಾತನಾಡಿ, ‘ಘಟನೆಯನ್ನು ಗಮನಿಸಿದರೆ, ಯಾರೋ ‘ಅನನುಭವಿ’ ವ್ಯಕ್ತಿಯೊಬ್ಬರು, ಇಲಾಖೆಯೊಳಗಿನವರೇ ಕೃತ್ಯ ಎಸಗಿರಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.