ADVERTISEMENT

Train Firing: 2017ರಲ್ಲಿ ವ್ಯಕ್ತಿಗೆ ವಿನಾಕಾರಣ ಉಪಟಳ ನೀಡಿದ್ದ ಕಾನ್‌ಸ್ಟೇಬಲ್!

ಪಿಟಿಐ
Published 17 ಆಗಸ್ಟ್ 2023, 6:45 IST
Last Updated 17 ಆಗಸ್ಟ್ 2023, 6:45 IST
ಚೇತನ್‌ ಸಿಂಗ್‌ ಚೌಧರಿ
ಚೇತನ್‌ ಸಿಂಗ್‌ ಚೌಧರಿ   ಪಿಟಿಐ ಚಿತ್ರ

ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಹಾಗೂ ಮೂವರು ಪ್ರಯಾಣಿಕರನ್ನು ಗುಂಡು ಹಾರಿಸಿ ಕೊಲೆ ಮಾಡಿ ಕೆಲಸದಿಂದ ವಜಾಗೊಂಡಿರುವ ರೈಲ್ವೆ ರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಸಿಂಗ್‌ ಚೌಧರಿ ಈ ಹಿಂದೆ ಮುಸ್ಲಿಂ ವ್ಯಕ್ತಿಗೆ ವಿನಾಕಾರಣ ಉಪಟಳ ನೀಡಿದ್ದ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

‌ಇದನ್ನೂ ಓದಿ: ರೈಲಿನಲ್ಲಿ ಗುಂಡಿನ ದಾಳಿ: ಆರ್‌ಪಿಎಫ್ ಕಾನ್‌ಸ್ಟೆಬಲ್ ಸೇವೆಯಿಂದ ಅಮಾನತು

2017ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಚೌಧರಿ ಶ್ವಾನ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆ ವೇಳೆ ಓರ್ವ ಮುಸಲ್ಮಾನ ವ್ಯಕ್ತಿಯನ್ನು ಆರ್‌ಪಿಎಫ್‌ ಪೋಸ್ಟ್‌ಗೆ ಕರೆತಂದು ವಿನಾಕಾರಣ ಹಿಂಸೆ ನೀಡಿದ್ದ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

‌ಘಟನೆ ಸಂಬಂಧ ಚೌಧರಿ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಸಹೋದ್ಯೋಗಿಯ ಮೇಲೆ ಚೌಧರಿ ಹಲ್ಲೆ ನಡೆಸಿದ್ದ. ಇನ್ನೊಂದು ಘಟನೆಯಲ್ಲಿ ಸಹೋದ್ಯೋಗಿಯ ಎಟಿಎಂನಿಂದ ಹಣ ತೆಗೆದುಕೊಂಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲಿನಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.