ADVERTISEMENT

ತರಬೇತಿ ವಿಮಾನ ಪತನ: ಮಹಿಳಾ ಪೈಲಟ್‌ಗೆ ಗಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2022, 10:01 IST
Last Updated 25 ಜುಲೈ 2022, 10:01 IST
ವಿಮಾನ ಪತನ
ವಿಮಾನ ಪತನ   

ಪುಣೆ: ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಪತನಗೊಂಡಿದ್ದು ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತರಬೇತಿ ವಿಮಾನವು ಇಂದಾಪುರ ತಾಲೂಕಿನ ಕಡಬನವಾಡಿ ಗ್ರಾಮದ ಜಮೀನಿನಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಮಹಿಳಾ ಪೈಲಟ್‌ ಅಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದುಪೊಲೀಸರು ಮಾಹಿತಿ ನೀಡಿದ್ದಾರೆ.

ಈ ತರಬೇತಿ ವಿಮಾನ ಕಾರ್ವರ್ ಏವಿಯೇಷನ್ ಸಂಸ್ಥೆಗೆ ಸೇರಿದೆ. ಇದರ ಮೂಲಕ ಪೈಲಟ್‌ ಭವಿಕಾ ರಾಥೋಡ್‌ ಅವರಿಗೆ ತರಬೇತಿ ನೀಡಲಾಗುತ್ತಿತ್ತು. ಸೋಮವಾರ ಬೆಳಗ್ಗೆಬಾರಾಮತಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ 11 ಗಂಟೆ ಸುಮಾರಿಗೆ ಪತನವಾಗಿತ್ತು.

ADVERTISEMENT

ವಿಮಾನ ಪತನಗೊಂಡ ಮಾಹಿತಿ ತಿಳಿದ ಸ್ಥಳೀಯರು ಸ್ಥಳಕ್ಕೆ ದಾವಿಸಿ ಪೈಲಟ್‌ ಅವರನ್ನು ರಕ್ಷಣೆ ಮಾಡಿದ್ದಾರೆ. ನಂತರ ಪೊಲೀಸರು ಹಾಗೂ ಅಗ್ನಿಶಾಮಕಸಿಬ್ಬಂದಿ ಆಗಮಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘಟನೆ ಕುರಿತು ವಿಮಾನಯಾನ ಅಧಿಕಾರಿಗಳು ತನಿಖೆಗೆ ಆದೇಶ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.