ADVERTISEMENT

ಬಿಜೆಪಿ, ಡಿಎಂಕೆ ವಿರುದ್ದ ವಿಜಯ್ ಕಿಡಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 19:24 IST
Last Updated 27 ಅಕ್ಟೋಬರ್ 2024, 19:24 IST
<div class="paragraphs"><p>ನಟ ವಿಜಯ್</p></div>

ನಟ ವಿಜಯ್

   

-ಎಕ್ಸ್‌ (ಟ್ವಿಟರ್‌) ಚಿತ್ರ

ವಿಕ್ರವಾಂಡಿ: ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ನಟ, ರಾಜಕಾರಣಿ ದಳ‍ಪತಿ ವಿಜಯ್‌ ಅವರು ತಮ್ಮ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವನ್ನು ಭಾನುವಾರ ಔಪಚಾರಿಕವಾಗಿ ಅನಾವರಣಗೊಳಿಸಿದರು.

ADVERTISEMENT

ವಿಕ್ರವಾಂಡಿಯಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಮೊದಲ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ವಿಭಜಕ’ ಬಿಜೆಪಿ ಮತ್ತು ‘ಭ್ರಷ್ಟ’ ಡಿಎಂಕೆಯು ಕ್ರಮವಾಗಿ ತಮ್ಮ ‘ಸೈದ್ಧಾಂತಿಕ’ ಹಾಗೂ ‘ರಾಜಕೀಯ’ ವಿರೋಧಿಗಳು ಎಂದು ಘೋಷಿಸಿದರು.

50 ವರ್ಷದ ವಿಜಯ್ ಅವರು ‘ಜಾತ್ಯತೀತತೆ’ ಮತ್ತು ‘ಸಾಮಾಜಿಕ ನ್ಯಾಯ’ವು ಟಿವಿಕೆಯ ಎರಡು ಸಿದ್ಧಾಂತಗಳು ಎಂದು ಪ್ರಕಟಿಸಿದರಲ್ಲದೆ, ‘ದ್ರಾವಿಡವಾದ‘ ಮತ್ತು ‘ತಮಿಳು ರಾಷ್ಟ್ರೀಯತೆ’ಯನ್ನು ತಮಿಳುನಾಡಿನ ‘ಎರಡು ಕಣ್ಣುಗಳು‘ ಎಂದು ಬಣ್ಣಿಸಿದರು.

‘ಟಿವಿಕೆಯ ಸಿದ್ಧಾಂತ ಮತ್ತು ನನ್ನ ನಾಯಕತ್ವವನ್ನು ಒಪ್ಪಿಕೊಳ್ಳುವ ರಾಜಕೀಯ ಪಕ್ಷಗಳೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಲು ಸಿದ್ಧನಿದ್ದೇನೆ’ ಎಂದು ಅವರು ಘೋಷಿಸಿದರು. 

3 ಲಕ್ಷಕ್ಕೂ ಅಧಿಕ ಮಂದಿ ಭಾಗಿ: ಟಿವಿಕೆ ಪಕ್ಷದ ಸಮಾವೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದರು. ಸಮಾವೇಶದ ತಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ ಉಂಟಾದ್ದರಿಂದ ಅಭಿಮಾನಿಗಳು ಹಲವು ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಯಿತು.

ಈ ವರ್ಷದ ಫೆಬ್ರುವರಿ 2ರಂದು ತಮ್ಮ ಪಕ್ಷದ ಹೆಸರನ್ನು ಪ್ರಕಟಿಸಿದ್ದ ವಿಜಯ್‌, ಈ ಮೂಲಕ ರಾಜಕೀಯ ಪ್ರವೇಶವನ್ನು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.