ADVERTISEMENT

ಟಿಎಂಸಿ ಪಕ್ಷದ ಟ್ವಿಟರ್ ಖಾತೆ ಹ್ಯಾಕ್ ಮಾಡಿ ಹೆಸರು ಬದಲಾವಣೆ!

ಪಿಟಿಐ
Published 28 ಫೆಬ್ರುವರಿ 2023, 4:57 IST
Last Updated 28 ಫೆಬ್ರುವರಿ 2023, 4:57 IST
   

ನವದೆಹಲಿ: ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ‘Yuga Labs’ ಎಂದು ಹೆಸರು ಬದಲಿಸಲಾಗಿದೆ.

ಈ ಕುರಿತಂತೆ ಟಿಎಂಸಿ ವಕ್ತಾರ ಡೆರೆಕ್ ಓಬ್ರಿಯಾನ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಯುಗ ಲ್ಯಾಬ್ಸ್ ಎಂದು ಹೆಸರು ಬದಲಿಸಲಾಗಿದೆ. ಈ ಸಂಬಂಧ ಟ್ವಿಟರ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಸಮಸ್ಯೆ ಬಗೆ ಹರಿಸಲಾಗುತ್ತಿದೆ’ಎಂದು ರಾಜ್ಯಸಭೆಯ ಟಿಎಂಸಿ ನಾಯಕರೂ ಆಗಿರುವ ಓಬ್ರಿಯಾನ್ ಹೇಳಿದ್ದಾರೆ.

ADVERTISEMENT

ಟ್ವಿಟರ್ ಖಾತೆಗೆ ಕಪ್ಪು ಫಾಂಟ್‌ನ 'Y' ಶೇಪ್‌ನ ಲೋಗೊ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.