ADVERTISEMENT

ತ್ರಿಪುರಾ: ಐಪ್ಯಾಕ್ ಸದಸ್ಯರ ವಿಚಾರಣೆ

ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್‌ ಒಡೆತನದ ಸಂಸ್ಥೆ

ಪಿಟಿಐ
Published 26 ಜುಲೈ 2021, 20:19 IST
Last Updated 26 ಜುಲೈ 2021, 20:19 IST

ಅಗರ್ತಲಾ: ತ್ರಿಪುರಾದಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ದೊರೆಯಬಹುದಾದ ರಾಜಕೀಯ ನೆಲೆ ಮತ್ತು ಸಂಭಾವ್ಯ ಬೆಂಬಲದ ಬಗ್ಗೆ ಲೆಕ್ಕಾಚಾರ ಹಾಕಲು ಇಲ್ಲಿ ಹೋಟೆಲ್‌ವೊಂದರಲ್ಲಿ ಒಂದು ವಾರದಿಂದ ಬೀಡುಬಿಟ್ಟಿದ್ದ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಘಟನೆ ಸದಸ್ಯರನ್ನು ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ದಿನನಿತ್ಯದ ತಪಾಸಣೆಯ ಭಾಗವಾಗಿ ಅಗರ್ತಲಾದ ಹೋಟೆಲ್‌ನಲ್ಲಿ 22 ಸದಸ್ಯರ ಐ-ಪ್ಯಾಕ್ ತಂಡವನ್ನು ಪ್ರಶ್ನಿಸಲಾಗುತ್ತಿದೆ ಎಂದು ಪಶ್ಚಿಮ ತ್ರಿಪುರಾದ ಪೊಲೀಸ್ ಅಧೀಕ್ಷಕ ಮಾಣಿಕ್ ದಾಸ್ ಹೇಳಿದ್ದಾರೆ.

‘ಐಪ್ಯಾಕ್ ತಂಡವು ಭಾನುವಾರ ರಾತ್ರಿಯಿಂದ ಹೋಟೆಲ್‌ನಲ್ಲಿ ಬಂಧನದಲ್ಲಿದೆ ಎಂದು ತ್ರಿಪುರಾ ಟಿಎಂಸಿ ರಾಜ್ಯ ಘಟಕದ ಅಧ್ಯಕ್ಷ ಆಶಿಶ್ ಲಾಲ್ ಸಿಂಗ್‌ ಆರೋಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.