ADVERTISEMENT

ತ್ರಿಪುರ ವಿರೋಧ ಪ‍ಕ್ಷದ ನಾಯಕ ರಾಜೀನಾಮೆ: BJP ಜತೆ ಸೇರಿ ಸಚಿವರಾಗಲಿರುವ ಅನಿಮೇಶ್

ಪಿಟಿಐ
Published 7 ಮಾರ್ಚ್ 2024, 6:32 IST
Last Updated 7 ಮಾರ್ಚ್ 2024, 6:32 IST
<div class="paragraphs"><p>ಅನಿಮೇಶ್ ದೆಬ್ಬಾರ್ಮ</p></div>

ಅನಿಮೇಶ್ ದೆಬ್ಬಾರ್ಮ

   

-ಎಕ್ಸ್ ಚಿತ್ರ

ಅಗರ್ತಲಾ: ತಿಪ್ರ ಮೋಥಾ ಪಕ್ಷದ ನಾಯಕ ಅನಿಮೇಶ್ ದೆಬ್ಬಾರ್ಮ ಅವರು ತ್ರಿಪುರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ADVERTISEMENT

ಅವರು ತಮ್ಮ ಪಕ್ಷದ ಮತ್ತೊರ್ವ ಶಾಸಕ ಬ್ರಿಶಕೇತು ದೆಬ್ಬಾರ್ಮ ಅವರೊಂದಿಗೆ ಇಂದು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ.

‘60 ಸಂಖ್ಯಾಬಲ ಇರುವ ವಿಧಾನಸಭೆಯಲ್ಲಿ ತಿಪ್ರ ಮೋಥಾ ಪಕ್ಷದ 13 ಶಾಸಕರಿದ್ದಾರೆ. ಪಕ್ಷವು ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಪಾಲುದಾರನಾಗಲಿದ್ದು, ಎರಡು ಸಚಿವ ಸ್ಥಾನಗಳು ಸಿಗಲಿವೆ’ ಎಂದು ಅನಿಮೇಶ್ ಹೇಳಿದ್ದಾರೆ.

ತ್ರಿಪುರಾದ ಸ್ಥಳೀಯ ಜನರ ಎಲ್ಲಾ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವ ತ್ರಿಪಕ್ಷೀಯ ಒಪ್ಪಂದಕ್ಕೆ ತಿಪ್ರ ಮೋಥಾ, ತ್ರಿಪುರಾ ಸರ್ಕಾರ ಮತ್ತು ಕೇಂದ್ರದ ನಡುವೆ ದೆಲಿಯಲ್ಲಿ ಸಹಿ ಹಾಕಿದ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಸದ್ಯ ತ್ರಿಪುರಾದಲ್ಲಿ ಮುಖ್ಯಮಂತ್ರಿ ಮಣಿಕ್ ಶಾ ಸೇರಿ ಒಟ್ಟು 9 ಮಂದಿ ಸಚಿವರಿದ್ದಾರೆ. ಒಟ್ಟು 12 ಮಂದಿಗೆ ಮಂತ್ರಿ ಆಗುವ ಅವಕಾಶ ಇದೆ.

ರಾಜೀನಾಮೆ ಬಳಿಕ ಮಾತನಾಡಿದ ಅನಿಮೇಶ್, ರಾಜ್ಯಭವನಕ್ಕೆ ತೆರಳಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದರು.

ಸದ್ಯ ರಾಜ್ಯದ ಹೊರಗೆ ಇರುವ ತ್ರಿಪ್ರಾ ಮೋಥಾ ಪಕ್ಷದ ಮುಖ್ಯಸ್ಥ ಪ್ರದ್ಯೋತ್ ದೆಬ್ಬಾರ್ಮ ಅವರು ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಆಗಮಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.