ADVERTISEMENT

ಟಿಆರ್‌ಎಸ್‌ ತಾಲಿಬಾನ್‌ಸೇನೆ: ಜಗನ್‌ ಸಹೋದರಿ ಶರ್ಮಿಳಾ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 6:12 IST
Last Updated 3 ಡಿಸೆಂಬರ್ 2022, 6:12 IST
ವೈ.ಎಸ್‌.ಶರ್ಮಿಳಾ
ವೈ.ಎಸ್‌.ಶರ್ಮಿಳಾ   

ಹೈದರಾಬಾದ್‌: ‘ಟಿಆರ್‌ಎಸ್‌ ಪಕ್ಷವು ತಾಲಿನಾಬ್‌ ಸೇನೆ. ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಮತ್ತು ಸಂಪುಟದ ಸಚಿವರು ನಿಂದಕರು. ಕೆಸಿಆರ್‌ ಅವರದ್ದು ಕಡುಭ್ರಷ್ಟ ಕುಟುಂಬ’ ಎಂದು ವೈಎಸ್‌ಆರ್‌ಟಿಪಿ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಟೀಕಿಸಿದ್ದಾರೆ.

ರಾಜ್ಯಪಾಲರಾದ ತಮಿಳ್‌ಸೈ ಸೌಂದರರಾಜನ್‌ ಅವರನ್ನು ಗುರುವಾರ ರಾಜಭವನದಲ್ಲಿ ಭೇಟಿಯಾಗಿದ್ದ ಶರ್ಮಿಳಾ, ‘ಟಿಆರ್‌ಎಸ್‌ ಸಚಿವರು, ನಾಯಕರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದು, ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ಆರೋಪಿಸಿದರು.

ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಟಿಆರ್‌ಎಸ್‌ ಸಚಿವರೊಬ್ಬರು ನನ್ನನ್ನು ಮರಗಲು (ನಾದಿನಿ) ಎಂದು ಕರೆದರು. ನಾನು, ಆತ್ಮಗೌರವವುಳ್ಳ ಮಹಿಳೆ. ಶೂನಲ್ಲಿಯೇ ಬಾರಿಸುತ್ತೇನೆ ಎಂದು ಆ ಸಚಿವರಿಗೆ ಪ್ರತಿಕ್ರಿಯಿಸಿದ್ದೇನೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಶೇ 17ರಷ್ಟು ಏರಿಕೆಯಾಗಿದೆ. ಒಂದು ವರ್ಷದ ಪಾದಯಾತ್ರೆ ಅವಧಿಯಲ್ಲಿ ಟಿಆರ್‌ಎಸ್‌ ಸಚಿವರೇ ಕೀಳುಮಟ್ಟದಿಂದ ನಿಂದಿಸಿದ್ದಾರೆ. ಇದು, ರಾಜ್ಯದಲ್ಲಿನ ಸ್ಥಿತಿಯನ್ನು ಬಿಂಬಿಸುತ್ತದೆ’ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.