ADVERTISEMENT

ಸಮಾನತೆ, ನ್ಯಾಯಕ್ಕಾಗಿ ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮುಖ್ಯ: ರಾಹುಲ್

ಪಿಟಿಐ
Published 29 ಸೆಪ್ಟೆಂಬರ್ 2024, 10:24 IST
Last Updated 29 ಸೆಪ್ಟೆಂಬರ್ 2024, 10:24 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ನವದೆಹಲಿ: ಸಮಾಜದಲ್ಲಿ ನಿಜವಾದ ಸಮಾನತೆ ಮತ್ತು ನ್ಯಾಯವನ್ನು ಒದಗಿಸಲು ರಾಜಕೀಯದಲ್ಲಿ ಹೆಚ್ಚಿನ ಮಹಿಳೆಯರು ಪಾಲ್ಗೊಳ್ಳುವ ಅಗತ್ಯವಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಪ್ರತಿಪಾದಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ರಾಜಕೀಯದಲ್ಲಿ ಮಹಿಳೆಯರ ಧ್ವನಿ ಹೆಚ್ಚಿಸುವ ಉದ್ದೇಶದಿಂದ ವರ್ಷಗಳ ಹಿಂದೆ ‘ಇಂದಿರಾ ಫೆಲೋಶಿಪ್‌’ ಅನ್ನು ನಾವು ಪ್ರಾರಂಭಿಸಿದ್ದೇವೆ. ಇಂದು ಈ ಉಪಕ್ರಮವು ಮಹಿಳೆಯರ ನಾಯಕತ್ವಕ್ಕಾಗಿ ಪ್ರಬಲ ಚಳವಳಿಯಾಗಿ ಬೆಳೆದಿದೆ’ ಎಂದು ಹೇಳಿದ್ದಾರೆ.

ADVERTISEMENT

‘ದೇಶದಲ್ಲಿ ನಿಜವಾದ ಬದಲಾವಣೆ ಸೃಷ್ಟಿಸಲು ಉತ್ಸುಕರಾಗಿರುವ ಮಹಿಳೆಯರು ‘ಶಕ್ತಿ ಅಭಿಯಾನ’ಕ್ಕೆ ಸೇರ್ಪಡೆಗೊಳ್ಳುವಂತೆ ಮತ್ತು ಮಹಿಳಾ ಕೇಂದ್ರಿತ ರಾಜಕೀಯದಲ್ಲಿ ಸಕ್ರಿಯವಾಗಿರುವಂತೆ ನಾನು ಒತ್ತಾಯಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಹಳ್ಳಿಗಳಿಂದ ಇಡೀ ದೇಶದಾದ್ಯಂತ ಬದಲಾವಣೆಯನ್ನು ಸೃಷ್ಟಿಸಬಹುದು’ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಯುವ ಕಾಂಗ್ರೆಸ್‌ನ ‘ಶಕ್ತಿ ಅಭಿಯಾನ’ ಉಪಕ್ರಮವು ರಾಜಕೀಯದಲ್ಲಿ ಮಹಿಳೆಯರ ಹಿತಾಸಕ್ತಿಗಳಿಗೆ ಸಮಾನ ಸ್ಥಾನಮಾನ ಸೃಷ್ಟಿಸುವ ಗುರಿಯನ್ನು ಹೊಂದಿದೆ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಧ್ವನಿಯನ್ನು ವರ್ಧಿಸಲು ಮತ್ತು ಸಮಾಜದಲ್ಲಿ ಅಗತ್ಯವಿರುವ ಪರಿವರ್ತನೆಯನ್ನು ತರಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗೌರವಾರ್ಥವಾಗಿ ‘ಇಂದಿರಾ ಫೆಲೋಶಿಪ್‌’ ಅನ್ನು ಪ್ರಾರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.