ADVERTISEMENT

ಟಿಎಸ್‌ಆರ್‌ಟಿಸಿ ಕಗ್ಗಂಟು: ಕಾರ್ಮಿಕರ ನಿಕೃಷ್ಟವಾಗಿ ಕಂಡರೆ ಉದ್ಧಾರವಾದೀತೆ ಸಂಸ್ಥೆ

ಎಂ.ಪಿ.ಚಪೆಟ್ಲಾ
Published 27 ಅಕ್ಟೋಬರ್ 2019, 10:29 IST
Last Updated 27 ಅಕ್ಟೋಬರ್ 2019, 10:29 IST
ಗುರುಮಠಕಲ್ ಹತ್ತಿರದ ತೆಲಂಗಾಣ ರಾಜ್ಯದ ಜಿಲ್ಲಾ ಕೇಂದ್ರವಾದ ನಾರಾಯಣಪೇಟೆ ನಗರದ ಟಿಎಸ್‌ಆರ್‌ಟಿಸಿ ನಿರ್ವಾಹಕಿ ಡಿ.ಶ್ರೀಲಕ್ಷ್ಮೀಯವರ ಕುಟುಂಬ ಚಿಂತೆಯಲ್ಲಿ ಮುಳುಗಿರುವುದು.
ಗುರುಮಠಕಲ್ ಹತ್ತಿರದ ತೆಲಂಗಾಣ ರಾಜ್ಯದ ಜಿಲ್ಲಾ ಕೇಂದ್ರವಾದ ನಾರಾಯಣಪೇಟೆ ನಗರದ ಟಿಎಸ್‌ಆರ್‌ಟಿಸಿ ನಿರ್ವಾಹಕಿ ಡಿ.ಶ್ರೀಲಕ್ಷ್ಮೀಯವರ ಕುಟುಂಬ ಚಿಂತೆಯಲ್ಲಿ ಮುಳುಗಿರುವುದು.   

ನಾರಾಯಣಪೇಟೆ (ತೆಲಂಗಾಣ):‌ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲಬುರ್ಗಿ ಜಿಲ್ಲೆ ನಾರಾಯಣಪೇಟೆ ಸಮೀಪವಿರುವತೆಲಂಗಾಣ ರಾಜ್ಯದನಾರಾಯಣಪೇಟೆ ನಗರದಲ್ಲಿ ಟಿಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆನೀಡಿರುವ ಅನಿರ್ಧಿಷ್ಟಾವಧಿ ಧರಣಿ ಅ.28ಕ್ಕೆ23ನೇ ದಿನಕ್ಕೆ ಕಾಲಿಟ್ಟಿದೆ.

ಕನಿಷ್ಠ ಉದ್ಯೋಗಭದ್ರತೆಯೂ ದುಡಿಸಿಕೊಳ್ಳುವುದು ಸರ್ಕಾರದ ಚಿಂತನೆಯೇ? ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಮುಖ್ಯಮಂತ್ರಿ ಚಂದ್ರಶೇಖರರಾವ್‌ ನಿಗಮವನ್ನು ಮುಚ್ಚುವ ಮಾತಾಡುತ್ತಿದ್ದಾರೆ. ಉದ್ಯೋಗ ಭದ್ರತೆ ಇಲ್ಲದೆ ದುಡಿಯುತ್ತಿದ್ದೇವೆ. ಅಭದ್ರತೆ ಭಯದಲ್ಲಿ ಉದ್ಯೋಗ ಮಾಡುವ ಬದಲು ಬೇರೇನಾದರೂ ಮಾಡಿಕೊಂಡು ಬದುಕುವುದು ಉತ್ತಮ’ ಎಂದು ನಿರ್ವಾಹಕಿ ಡಿ.ಶ್ರೀಲಕ್ಷ್ಮಿ ಸಿಟ್ಟಿನಲ್ಲಿ ಮಾತನಾಡಿದರು.

‘ಬ್ರೇನ್‌ ಟ್ಯೂಮರ್‌ನಿಂದ ಮನೆಯವರು ತೀರಿಕೊಂಡು 7 ವರ್ಷಗಳಾಗುತ್ತಿವೆ. ಮನೆಗೆ ಬೇರೆ ಯಾವ ಆಧಾರವೂ ಇಲ್ಲ. ಬರುವ ₹19 ಸಾವಿರದಲ್ಲಿಯೇ ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸದ ವೆಚ್ಚ, ಅತ್ತೆಯವರ ಔಷಧದ ಖರ್ಚು, ಅಲ್ಲಲ್ಲಿ ಪಡೆದ ಸಾಲದ ಕಂತು ಕಟ್ಟುವಷ್ಟರಲ್ಲಿ ಹಣ ಖಾಲಿಯಾಗಿರುತ್ತದೆ. ಹೀಗಾದರೆ ಮುಂದೆ ಮಕ್ಕಳ ಭವಿಷ್ಯದ ಗತಿಯೇನು’ ಎನ್ನುವ ಆತಂಕ ಅವರದು.

ಹಣಮಂತು, ಚಾಲಕ

ಟಿ.ಆರ್.ಟಿ.ಸಿಯನ್ನು ಸರ್ಕಾರದಲ್ಲಿ ವಿಲೀನಗೊಳಿಸಿ ನಮಗೆ ಉದ್ಯೋಗ ಭದ್ರತೆ ಕಲ್ಪಿಸುವವರೆಗೂ ಹೋರಾಡಲಿದ್ದೇವೆ. ಈಗಿನ ಡೋಲಾಯಮಾನ ಸ್ಥಿತಿಗಿಂತಲೂ ರಸ್ತೆ ಬದಿ ಸಣ್ಣ ವ್ಯಾಪಾರ ಮಾಡಿಕೊಳ್ಳುವುದು ಲಾಭದಾಯಕವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಂಸ್ಥೆಯ ನಷ್ಟಕ್ಕೆ ನಾವು ಹೇಗೆ ಕಾರಣರಾಗುತ್ತೇವೆ? ಖಾಸಗಿ ಸಾರಿಗೆ ಸಂಸ್ಥೆಗಳು ಲಾಭದ ದೃಷ್ಟಿಯಿಂದ ಬಸ್‌ಗಳನ್ನು ಲಾಭ ಬರುವ ಮಾರ್ಗದಲ್ಲಿ ಓಡಿಸುತ್ತವೆ. ಟಿಎಸ್‌ಆರ್‌ಟಿಸಿ ಬಸ್‌ಗಳು ಚಿಕ್ಕ ಹಳ್ಳಿಗಳಿಂದ ಮೊದಲುಗೊಂಡು ರಸ್ತೆಗಳೂ ಸರಿಯಿಲ್ಲದ ಗ್ರಾಮಗಳಲ್ಲಿಯೂ ಸೇವೆ ನೀಡುತ್ತಿವೆ’ಎಂದು ತಿಳಿಸಿದರು.

‘ಸಂಸ್ಥೆಯನ್ನು ಸರ್ಕಾರದಲ್ಲಿ ವಿಲೀನಗೊಳಿಸಿದರೆ ಉದ್ಯೋಗದ ಭದ್ರತೆ, ಪಿಎಫ್‌, ಬ್ಯಾಂಕಿನಲ್ಲಿ ಸಾಲ ಸೌಲಭ್ಯ, ಸರ್ಕಾರದಿಂದ ಸಂಸ್ಥೆಯ ಅಭಿವೃದ್ಧಿಗಾಗಿ ನಿಧಿ ಹೀಗೆ ಹಲವು ಸೌಲಭ್ಯಗಳು ಸಿಗುತ್ತವೆ. ಕಾರ್ಮಿಕರನ್ನು ದುಡಿಸಿಕೊಳ್ಳುವ ರೀತಿ ಅಮಾನುಷವಾಗಿದ್ದರೆ ಸಂಸ್ಥೆ ಏಳಿಗೆ ಹೇಗೆ ಸಾಧ್ಯವಾಗುತ್ತದೆ’ ಎನ್ನುವುದು ಹೆಸರು ಹೇಳಲು ಇಚ್ಛಿಸದ ಚಾಲಕರೊಬ್ಬರ ಪ್ರಶ್ನೆ.

‘ನಮ್ಮ ಹೋರಾಟ ಮುಂದುವರೆಯಲಿದೆ. ಸಂಸ್ಥೆಯನ್ನು ಮುಚ್ಚುತ್ತೇನೆ. ಜನರು ಸರ್ಕಾರದ ಪರವಿದ್ದಾರೆ ಎನ್ನುವ ಮುಖ್ಯಮಂತ್ರಿ ನಮ್ಮ ಬೇಡಿಕೆಗಳನ್ನೂ ಸಹ ಈಡೇರಿಸಲಿ’ ಎಂದು ಚಾಲಕರಾದಹಣಮಂತು ಒತ್ತಾಯಿಸಿದರು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.