ಹೈದರಾಬಾದ್: ರಾಮಮಂದಿರ ಟ್ರಸ್ಟ್‌ನವರು ಅಯೋಧ್ಯೆಯಲ್ಲಿ ಜಾಗ ಮಂಜೂರು ಮಾಡಿದರೆ, ಅಲ್ಲಿ ವೆಂಕಟೇಶ್ವರ ದೇವಸ್ಥಾನ ನಿರ್ಮಿಸುವ ಪ್ರಸ್ತಾವಕ್ಕೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ಶನಿವಾರ ಅನುಮೋದನೆ ನೀಡಿದೆ.
ದೇವಸ್ಥಾನ ನಿರ್ಮಾಣ ಸಾಧ್ಯವಾಗದಿದ್ದಪಕ್ಷದಲ್ಲಿ, ಪ್ರವಾಸಿ ಸೌಲಭ್ಯಗಳನ್ನು ಹೊಂದಿರುವ ಭಜನಾ ಮಂದಿರವೊಂದನ್ನಾದರೂ ನಿರ್ಮಿಸಲು ಟಿಟಿಡಿ ಆಡಳಿತ ಮಂಡಳಿ ಆಸಕ್ತಿ ವ್ಯಕ್ತಪಡಿಸಿದೆ. ಮುಂಬೈ ಹಾಗೂ ಜಮ್ಮುವಿನಲ್ಲಿ ಶ್ರೀನಿವಾಸ ದೇವಸ್ಥಾನ ನಿರ್ಮಾಣಕ್ಕೆ ಮಂಡಳಿಯು ಈಗಾಗಲೇ ತೀರ್ಮಾನಿಸಿದ್ದು ಅದರ ಭೂಮಿಪೂಜೆಯ ಸಿದ್ಧತೆಗಳು ನಡೆಯುತ್ತಿದೆ.
ಮಂಡಳಿಯ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. 2021–22ನೇ ಸಾಲಿಗೆ ₹2937.82 ಕೋಟಿ ಬಜೆಟ್‌ಗೆ ಮಂಡಳಿ ಅನುಮೋ
ದನೆ ನೀಡಿದೆ. 2020–21ನೇ ಸಾಲಿಗೆ ಹೋಲಿಸಿದರೆ ಈ ಬಾರಿ ₹ಬಜೆಟ್ ಗಾತ್ರವು ₹373 ಕೋಟಿಯಷ್ಟು ಕುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.