ADVERTISEMENT

ಕಲಬೆರಕೆ ತುಪ್ಪ ಪೂರೈಸಿದವರ ವಿರುದ್ಧ ಪ್ರಕರಣ

ಟಿಟಿಡಿಗೆ ಪ್ರಾಣಿ ಕೊಬ್ಬಿನ ಅಂಶವಿದ್ದ ತುಪ್ಪ ಕಳುಹಿಸಿದ್ದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 16:27 IST
Last Updated 25 ಸೆಪ್ಟೆಂಬರ್ 2024, 16:27 IST
ತುಪ್ಪ/ಸಾಂದರ್ಭಿಕ ಚಿತ್ರ
ತುಪ್ಪ/ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ತಿರುಪತಿ ಲಾಡು ಪ್ರಸಾದ ವಿವಾದದ ಕೇಂದ್ರವಾದ ತಮಿಳುನಾಡು ಮೂಲದ ಎ.ಆರ್‌.ಡೇರಿ ಕಂಪನಿ ವಿರುದ್ಧ ತಿರುಪತಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಎ.ಆರ್‌.ಡೇರಿ ಪೂರೈಸಿದ ತುಪ್ಪವು ಸಸ್ಯಜನ್ಯ ಮತ್ತು ಪ್ರಾಣಿಗಳ ಕೊಬ್ಬಿನ ಅಂಶದೊಂದಿಗೆ ಕಲಬೆರಕೆ ಆಗಿತ್ತು ಎಂದು ಟಿಟಿಡಿ ಬುಧವಾರ ತಿರುಪತಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.

ಲಾಡು ಪ್ರಸಾದ ಸಿದ್ಧಪಡಿಸಲು ಈ ಡೇರಿಯಿಂದ ತರಿಸಿಕೊಂಡಿದ್ದ ತುಪ್ಪದ ಮಾದರಿಯನ್ನು ಗುಜರಾತಿನ ಎನ್‌ಡಿಡಿಬಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಅದರ ವರದಿ ಪ್ರಕಾರ, ತುಪ್ಪದಲ್ಲಿ ಹಂದಿ ಸೇರಿದಂತೆ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿದೆ ಎಂದು ಟಿಟಿಡಿ ದೂರಿನಲ್ಲಿ ಉಲ್ಲೇಖಿಸಿದೆ. ಟಿಟಿಡಿ ಮಾಡಿರುವ ಈ ಆರೋಪಗಳನ್ನು ಎ.ಆರ್‌.ಡೇರಿ ನಿರಾಕರಿಸಿದೆ.

ADVERTISEMENT

ಇದೇ 28ಕ್ಕೆ ಪೂಜೆ: ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಪತಿ ಲಾಡು ಕುರಿತು ಮಾಡಿರುವ ಆರೋಪಗಳಿಂದ ಕಳಂಕಿತವಾಗಿರುವ ತಿರುಮಲದ ಪಾವಿತ್ರ್ಯತೆಯನ್ನು ಮರು ಸ್ಥಾಪಿಸಲು ಇದೇ 28ರಂದು ಭಕ್ತರು ರಾಜ್ಯದ ದೇವಾಲಯದ ಪೂಜೆಗಳಲ್ಲಿ ಭಾಗವಹಿಸುವಂತೆ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.