ತಿರುಪತಿ, ಆಂಧ್ರಪ್ರದೇಶ (ಪಿಟಿಐ): ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿಯು ಲಾಡು ತಯಾರಿಸಲು ಅಗತ್ಯವಿರುವ ತುಪ್ಪವನ್ನು ಗುಣಮಟ್ಟ ಕುರಿತು ಎರಡು ಹಂತದ ಪರೀಕ್ಷೆಯ ನಂತರ ಹಾಗೂ ಇ–ಟೆಂಡರ್‌ನಲ್ಲಿ ಕಡಿಮೆ ಬಿಡ್ ದಾಖಲಿಸುವ ಪೂರೈಕೆದಾರರಿಂದ ಮಾತ್ರವೇ ಖರೀದಿಸಲಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಅವರು ಇತ್ತೀಚೆಗೆ ಆಡಳಿತ ಮಂಡಳಿಯು ಕಡಿಮೆ ಗುಣಮಟ್ಟದ ತುಪ್ಪವನ್ನು ಖರೀದಿಸುತ್ತಿದೆ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಎ.ವಿ. ಧರ್ಮರೆಡ್ಡಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಆಡಳಿತ ಮಂಡಳಿಯು ಯಾವುದೇ ವಸ್ತುವನ್ನು ಟೆಂಡರ್ ಮೂಲಕವೇ ಖರೀದಿಸಲಿದೆ. ಮೊದಲು ತಾಂತ್ರಿಕ ಮತ್ತು ನಂತರ ಹಣಕಾಸಿನ ಬಿಡ್ ನಡೆಯಲಿದೆ. ತುಪ್ಪದಂತಹ ವಸ್ತು ಖರೀದಿಸುವಾಗಿ ವೈಜ್ಞಾನಿಕವಾಗಿ ಅದರ ಗುಣಮಟ್ಟದ ಪರೀಕ್ಷೆ ನಡೆಯಲಿದೆ. ಸಂಸ್ಥೆಯ ಸಾಮರ್ಥ್ಯ, ಬಲ, ಹಾಲು ಸಂಗ್ರಹದ ಪ್ರಕ್ರಿಯೆ, ಪರಿಕರ ಹಾಗೂ ಇತರೆ ಅಂಶಗಳನ್ನೂ ಪರಿಗಣಿಸಲಾಗುತ್ತಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.