ADVERTISEMENT

ಅತ್ಯಾಚಾರ: ಟಿಕೆಟ್‌ ಪರಿಶೀಲನಾ ಅಧಿಕಾರಿ ಬಂಧನ

ಪಿಟಿಐ
Published 22 ಜನವರಿ 2023, 19:19 IST
Last Updated 22 ಜನವರಿ 2023, 19:19 IST
arrest
arrest   

ಸಂಭಲ್, ಉತ್ತರ ಪ್ರದೇಶ: ಸುಬೇದಾರ್‌ಗಂಜ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಟಿಕೆಟ್‌ ಪರಿಶೀಲನಾ ಅಧಿಕಾರಿಯನ್ನು (ಟಿಟಿಇ) ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ರಾಜು ಸಿಂಗ್‌ ಬಂಧಿತ ಅಧಿಕಾರಿ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಚಂದೌಸಿ ರೈಲು ನಿಲ್ದಾಣದ ಪೊಲೀಸ್‌ ಅಧಿಕಾರಿ ಕೆ.ಎನ್‌.ಸಿಂಗ್‌ ತಿಳಿಸಿದ್ದಾರೆ.

‘ಪ್ರಥಮ ದರ್ಜೆ ಎಸಿ ಕೋಚ್‌ನಲ್ಲಿ ಸೀಟು ದೊರಕಿಸಿಕೊಡುವುದಾಗಿ ಟಿಟಿಇ ಹಾಗೂ ಸಹ ಪ್ರಯಾಣಿಕನೊಬ್ಬ ಹೇಳಿ, ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂಬುದಾಗಿ ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.