ಚೆನ್ನೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿರುವ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದರು.
ನಾಲ್ಕು ದಿನಗಳಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರುಣಾನಿಧಿ ಅವರ ಆರೋಗ್ಯ ಸ್ಥಿರವಾಗಿದೆ.
15 ನಿಮಿಷ ಆಸ್ಪತ್ರೆಯಲ್ಲಿದ್ದ ರಾಹುಲ್ ಅವರಿಗೆ ಕರುಣಾನಿಧಿ ಅವರ ಪುತ್ರ ಎಂ.ಕೆ. ಸ್ಟಾಲಿನ್, ಪುತ್ರಿ ಕನಿಮೋಳಿ, ಸಂಬಂಧಿಗಳಾದ ದಯಾನಿಧಿ ಮತ್ತು ಕಲಾನಿಧಿ ಮಾರನ್ ಅವರು ಮಾಹಿತಿ ನೀಡಿದರು.
ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ರಾಹುಲ್ ಗಾಂಧಿ ಅವರು ಬಂದಿರುವ ವಿಷಯವನ್ನು ಪುತ್ರ ಸ್ಟಾಲಿನ್ ಅವರು ಕುರುಣಾನಿಧಿ ಅವರಿಗೆ ಕಿವಿಯಲ್ಲಿ ಹೇಳುತ್ತಿರುವ ಚಿತ್ರವನ್ನು ಡಿಎಂಕೆ ಬಿಡುಗಡೆ ಮಾಡಿದೆ.ಕೃಶರಾಗಿರುವ ಮತ್ತು ಕಪ್ಪು ಕನ್ನಡಕವಿಲ್ಲದ ಕರುಣಾನಿಧಿ ತಕ್ಷಣ ಗುರುತು ಸಿಗುವುದಿಲ್ಲ.
‘ಕರುಣಾನಿಧಿ ಅವರ ಆರೋಗ್ಯ ಸುಧಾರಿಸುತ್ತಿದ್ದು ಅವರು ತಮಿಳುನಾಡಿನ ಜನರಂತೆಯೇ ತುಂಬಾ ಗಟ್ಟಿಗರು’ ಎಂದು ರಾಹುಲ್ ಸುದ್ದಿಗಾರರಿಗೆ ತಿಳಿಸಿದರು.
ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆಯ ಎದುರು ಜಮಾಯಿಸಿರುವ ಡಿಎಂಕೆ ಕಾರ್ಯಕರ್ತರು ತಮ್ಮ ನಾಯಕನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಕುರಣಾನಿಧಿ ಆರೋಗ್ಯ ಕೊಂಚಮಟ್ಟಿಗೆ ಸುಧಾರಿಸಿದ್ದು ಕೃತಕ ಉಸಿರಾಟ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.