ತಿರುವನಂತಪುರ : ಕೇರಳದ ರೂಪದರ್ಶಿ ಹಾಗೂ ಸೆಲೆಬ್ರಿಟಿ ಶೆಫ್ ಜಗೀ ಜಾನ್ (38) ಅವರು ತಿರುವನಂತಪುರದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಗ ಮತ್ತು ಅಡುಗೆ ವಿಡಿಯೊಗಳಿಂದ ಜನಪ್ರಿಯರಾಗಿದ್ದ ಜಗೀ ಸೋಮವಾರ ತಮ್ಮ ಅಡುಗೆಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಗೀ ತಾಯಿಯೊಂದಿಗೆ ವಾಸಿಸುತ್ತಿದ್ದರು. ಜಗೀ ಅವರನ್ನು ಭೇಟಿಯಾಗಲು ಸ್ನೇಹಿತೆಯೊಬ್ಬರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಜಗೀ ಅವರ ತಲೆಯ ಹಿಂಭಾಗದಲ್ಲಿ ಗಾಯ ಕಂಡು ಬಂದಿದ್ದು, ಇದೇ ಸಾವಿಗೆ ಕಾರಣವಾಗಿರಬಹುದು. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮರೆವಿನ ಕಾಯಿಲೆಯಿಂದ ಬಳಲುತ್ತಿರುವ ಜಗೀ ಅವರ ತಾಯಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.