ಚೆನ್ನೈ:ಚಾಕು ತೋರಿಸಿ 24 ವರ್ಷದ ಯುವತಿಯನ್ನುಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದ್ದು, ಮೂವರು ಆರೋಪಿಗಳನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ವೆಲ್ಲೂರಿನಹೃದಯ ಭಾಗದಲ್ಲಿರುವ 16ನೇ ಶತಮಾನದ ವೆಲ್ಲೂರು ಕೋಟೆ ಸಮೀಪದ ಪಾರ್ಕ್‌ನಲ್ಲಿ ಏಕಾಂತದಲ್ಲಿರುವಾಗ ರಾತ್ರಿ 9.30ರ ಸುಮಾರಿಗೆ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ.
ಪ್ರಕರಣ ಸಂಬಂಧ ವಸಂತಪುರಂನ 45 ವರ್ಷದ ಮಣಿ ಅಲಿಯಾಸ್ ಮಣಿಕಂದನ್ ಮತ್ತು ಕೋಜಿ ಅಲಿಯಾಸ್ ಶಕ್ತಿನಾಥನ್ ಮತ್ತು 19 ವರ್ಷದ ಅಜಿತ್ ಎಂಬವರನ್ನು ಬಂಧಿಸಲಾಗಿದೆ.
ಪ್ರಿಯಕರನನ್ನು ಚೆನ್ನಾಗಿ ಥಳಿಸಿ ಆತನನ್ನು ಅಲ್ಲಿಂದ ಓಡಿಸಿದ್ದಾರೆ. ಬಳಿಕ ಯುವತಿಗೆಚಾಕು ತೋರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಆಕೆ ಬಳಿಯಿದ್ದ ಒಡವೆ ಮತ್ತು ಮೊಬೈಲ್ ಕಿತ್ತುಕೊಂಡಿದ್ದಾರೆ. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಸಂತ್ರಸ್ತೆಯನ್ನು ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ವರದಿಗಾಗಿ ಕಾಯಲಾಗುತ್ತಿದೆ.
ಇದನ್ನೂ ಓದಿ:ಯುವತಿ ಮೇಲೆಸೋದರ ಸಂಬಂಧಿಯಿಂದಲೇ ಲೈಂಗಿಕ ದೌರ್ಜನ್ಯ
ಅತ್ಯಾಚಾರ ಆರೋಪಿಗಳು ಈ ಮೊದಲು ದೌರ್ಜನ್ಯ ಮತ್ತು ಪಿಕ್‌ಪಾಕೆಟ್ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸದ್ಯ ಅತ್ಯಾಚಾರ ಮತ್ತು ದರೋಡೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಪುನೀತಾ ತಿಳಿಸಿದ್ದಾರೆ.
ಈ ತಿಂಗಳು ಸರ್ಕಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2018ರಲ್ಲಿ ದೇಶದಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಿರುವುದು ವರದಿಯಾಗಿದೆ.
2018ರಲ್ಲಿ ವರದಿಯಾದ 34,000 ಅತ್ಯಾಚಾರ ಪ್ರಕರಣಗಳಲ್ಲಿ ಶೇ 85ರಷ್ಟು ಪ್ರಕರಣಗಳಲ್ಲಷ್ಟೆೇ ಆರೋಪ ದಾಖಲಾಗಿದೆ ಮತ್ತು ಶೇ 27 ರಷ್ಟು ಆರೋಪ ಸಾಬೀತಾಗಿವೆ ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿದ ವಾರ್ಷಿಕ ಅಪರಾಧ ವರದಿಯಲ್ಲಿ ತಿಳಿಸಲಾಗಿದೆ.
ಭಾರತದ ಕೆಲವು ಭಾಗಗಳಲ್ಲಿ ಅತ್ಯಾಚಾರವನ್ನು ವರದಿ ಮಾಡಬಾರದು ಎಂದು ಪರಿಗಣಿಸುವುದರಿಂದಲೇ ಸರ್ಕಾರದ ಅಂಕಿ ಅಂಶಗಳು ಅತ್ಯಾಚಾರಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕೊಲೆಯಲ್ಲಿ ಕೊನೆಗೊಳ್ಳುವ ಅತ್ಯಾಚಾರಗಳನ್ನು ಕೇವಲ ಕೊಲೆಗಳೆಂದು ಪರಿಗಣಿಸಲಾಗುತ್ತದೆ.
ಇನ್ನಷ್ಟು:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.