ADVERTISEMENT

ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿ ಹೇಳಿದ ಸುಳ್ಳುಗಳು;ಟ್ವೀಟಿಗರಿಂದ ಸತ್ಯ ಶೋಧನೆ!

​ಪ್ರಜಾವಾಣಿ ವಾರ್ತೆ
Published 14 ಮೇ 2019, 4:25 IST
Last Updated 14 ಮೇ 2019, 4:25 IST
   

ಬೆಂಗಳೂರು:ಬಾಲಾಕೋಟ್ ವಾಯುದಾಳಿ ವೇಳೆ ಮೋಡ ಮುಸುಕಿದ ವಾತಾವರಣ ಇತ್ತು.ರಾತ್ರಿ 1.30ರಿಂದ 2.15ರ ನಡುವೆ ದಾಳಿ ನಡೆಸುವುದು ಎಂದು ತೀರ್ಮಾನಿಸಲಾಗಿತ್ತು. ಅಂತಹ ದಾಳಿಗೆ ಆ ಸಮಯ ಅತ್ಯಂತ ಪ್ರಶಸ್ತವಾಗಿತ್ತು. 12ರ ಹೊತ್ತಿಗೆ ಅಧಿಕಾರಿಗಳು ಮತ್ತು ತಜ್ಞರ ಜತೆ ಪರಿಶೀಲನಾ ಸಭೆ ನಡೆಸಿದೆ. ಆಗ ಬಾಲಾಕೋಟ್ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿತ್ತು ಮತ್ತು ಮೋಡ ಕವಿದ ವಾತಾವರಣವಿತ್ತು. ‘ಸರ್‌, ಕಾರ್ಯಾಚರಣೆಯ ದಿನಾಂಕವನ್ನು ಬದಲಿಸೋಣ’ ಎಂದು ತಜ್ಞರು ಹೇಳಿದರು. ಆಗ ನಾನು ನಮ್ಮ ವಿಮಾನಗಳನ್ನು ಪತ್ತೆ ಮಾಡಲು ಪಾಕಿಸ್ತಾನದ ರೇಡಾರ್‌ಗಳಿಗೆ ಸಾಧ್ಯವಿಲ್ಲ. ಆದ್ದರಿಂದ ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ಆದೇಶಿಸಿದ್ದೆ' - ಪ್ರಧಾನಿ ನರೇಂದ್ರ ಮೋದಿ ನ್ಯೂಸ್ ನೇಷನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಿದ್ದರು.

'ಮೋಡಗಳು ಇರುವುದರಿಂದ ಪಾಕಿಸ್ತಾನದ ರೇಡಾರ್‌ಗಳು ನಮ್ಮ ಯುದ್ಧವಿಮಾನಗಳನ್ನು ಪತ್ತೆ ಮಾಡಲಾರವು'ಎಂಬ ಮೋದಿ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದೆ.

ಇದೀಗ ಅದೇ ಸಂದರ್ಶನದಲ್ಲಿ ಮೋದಿ ಹೇಳಿದ ಕ್ಯಾಮೆರಾ ಮತ್ತು ಇಮೇಲ್ ಬಳಕೆಬಗ್ಗೆಟ್ವೀಟಿಗರು ಸತ್ಯ ಶೋಧನೆ ನಡೆಸಿದ್ದಾರೆ.

ADVERTISEMENT

ಮೋದಿಯವರ ಡಿಜಿಟಲ್ ಕ್ಯಾಮೆರಾ!
ನಾನು 1988ರಲ್ಲಿ ಡಿಜಿಟಲ್ ಕ್ಯಾಮೆರಾ ಬಳಸಿದ್ದೆ.ಭಾರತದಲ್ಲಿ ಈಗ ಡಿಜಿಟಲ್ಕ್ಯಾಮೆರಾ ಬಳಸಿದವರಲ್ಲಿ ನಾನೂ ಒಬ್ಬ.ಆ ಕ್ಯಾಮೆರಾದಿಂದ ನಾನು ಬಿಜೆಪಿಯ ಹಿರಿಯ ನಾಯಕ ಎಲ್‍.ಕೆ. ಅಡ್ವಾಣಿಯವರ ಕಲರ್ ಫೋಟೊ ಕ್ಲಿಕ್ಕಿಸಿದ್ದೆ. ಇಷ್ಟೇ ಅಲ್ಲ1988ರಲ್ಲಿಯೇ ತಾನು ಇಮೇಲ್ ಬಳಸುತ್ತಿದ್ದೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.

ಮೋದಿಯವರ ಈ ಮಾತಿನ ಬಗ್ಗೆ ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ ಹಲವಾರು ನೆಟ್ಟಿಗರು ಟ್ವೀಟ್ ಟೀಕೆ ಮಾಡಿದ್ದಾರೆ.

ಆರ್ಥಿಕ ತಜ್ಞೆ ರೂಪಾ ಸುಬ್ರಮಣ್ಯ ಅವರ ಟ್ಟೀಟ್ ಹೀಗಿದೆ

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ (ಅಮೆರಿಕ, ಕೆನಡಾ) ಆ ಕಾಲಕ್ಕೆ ಕೆಲವರಿಗೆ ಮಾತ್ರ ಇಮೇಲ್ ಲಭ್ಯವಾಗುತ್ತಿತ್ತು. ಆದರೆ ಮೋದಿಯವರು 1988ರಲ್ಲಿಯೇ ಭಾರತದಲ್ಲಿ ಇಮೇಲ್ ಬಳಸಿದ್ದರು.ಇಮೇಲ್ ಅಧಿಕೃತವಾಗಿ ಭಾರತಕ್ಕೆ ಪರಿಚಯಿಸಲ್ಪಟ್ಟಿದ್ದೇ 1995ರಲ್ಲಿ.ನಾನು ಮೊದಲ ಇಮೇಲ್ ಬಳಸಿದ್ದು 1996ರಲ್ಲಿ, ಆದರೆ ಮೋದಿ ನೀವು ಸಾಮಾನ್ಯ ವ್ಯಕ್ತಿ ಅಲ್ಲ!

ಭಾರತಕ್ಕೇ ಮುಜುಗರ!

ನಾನು 1993ರಲ್ಲಿ ಅಮೆರಿಕಕ್ಕೆ ಹೋಗಿದ್ದೆ.AOL ಆಗ ಪ್ರಾಬಲ್ಯದಲ್ಲಿತ್ತು. 1990ರಲ್ಲಿ ಅದು ಇಂಟರ್‌ನೆಟ್ ಸರ್ವೀಸ್ ಪ್ರೊವೈಡರ್ ಆಗಿತ್ತು. ನಾವು ವಿಶ್ವವಿದ್ಯಾನಿಲಯದಲ್ಲಿ DOS ಬಳಸಿ ಇಮೇಲ್ ಕಳುಹಿಸುತ್ತಿದ್ದೆವು.ಇದು ಭಾರತಕ್ಕೆ ಮುಜುಗರವುಂಟು ಮಾಡಿದೆ ಎಂದು ರಾಜಕೀಯ ವಿಮರ್ಶಕ ಸಲ್ಮಾನ್ ಸೋಜ್ ಟ್ವೀಟಿಸಿದ್ದಾರೆ.

ಮೋದಿಯವರ ಬಳಿ ಪರ್ಸ್ ಇರಲಿಲ್ಲ (ಯಾಕೆಂದರೆ ಅವರಲ್ಲಿ ಹಣವಿರಲಿಲ್ಲ) ಆದರೆ 1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಇತ್ತೇ?
ಇದೆಲ್ಲವೂ ತಮಾಷೆ ಮಾತ್ರವಲ್ಲ, ಮುಜುಗರಕ್ಕೀಡು ಮಾಡುವಂತದ್ದು, ತನ್ನ ಮನಸ್ಸಿಗೆ ತೋಚಿದ್ದನ್ನು ಹೇಳುವ ಪ್ರಧಾನಿಯವರನ್ನು ನಮ್ಮ ದೇಶದ ಭದ್ರತೆ ಬಗ್ಗೆ ವಿಷಯದಲ್ಲಿ ನಂಬುವುದು ಹೇಗೆ? ಎಂದು ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಟ್ವೀಟ್ ಮಾಡಿದ್ದಾರೆ.

ಮೋದಿಗೆ ಚಿಕಿತ್ಸೆಯ ಅಗತ್ಯವಿದೆ

ಮೋದಿ 1987-88ರಲ್ಲಿ ಡಿಜಿಟಲ್ ಕ್ಯಾಮೆರಾ ಹೊಂದಿದ್ದರು.1988ರಲ್ಲಿ ಇಮೇಲ್ ಖಾತೆ ಹೊಂದಿದ್ದರು.1988ರಲ್ಲಿ ಅವರು ಕಲರ್ ಫೋಟೊ ಲಗತ್ತಿಸಿ ಇಮೇಲ್‌ನ್ನು ಕಳಿಸಿದ್ದರು. ಮೋದಿ ಯಾವುದೋ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಅವರಿಗೆ ಸರಿಯಾದ ಚಿಕಿತ್ಸೆ ಅಗತ್ಯವಿದೆ.

ಮೋದಿ ಹೇಳಿದ್ದು ಸುಳ್ಳು

ಮೊದಲ ಡಿಜಿಟಲ್ ಕ್ಯಾಮೆರಾ Dycam Model 1- 1990ರಲ್ಲಿ ಮಾರುಕಟ್ಟೆಗೆ ಬಂದಿತ್ತು.ಗ್ರೇ ವರ್ಶನ್‌ Logitech Fotoman ಎಂಬ ಹೆಸರಲ್ಲಿ ಮಾರಾಟವಾಗಿತ್ತು.ಆದರೆ ಮೋದಿಯವರಲ್ಲಿ 1988ರಲ್ಲಿಯೇ ಡಿಜಿಟಲ್ ಕ್ಯಾಮೆರಾ ಇತ್ತು. 1995 ಆಗಸ್ಟ್ 14ರಂದು ಭಾರತದಲ್ಲಿ ಇಂಟರ್ನೆಟ್ ಸೇವೆ ಬಂತು.ಆದರೆ ಮೋದಿ 1988ರಲ್ಲಿಯೇ ಇಮೇಲ್ ಬಳಸಿದ್ದರು.

1988ರಲ್ಲಿ ಮೋದಿ ಬಳಿ ಡಿಜಿಟಲ್ ಕ್ಯಾಮೆರಾ ಇತ್ತು.1988ರಲ್ಲಿ ಅವರು ಇಮೇಲ್ ಬಳಸಿದ್ದರು.
ನಿಮ್ಮ ಮಾಹಿತಿಗಾಗಿ: ಭಾರತದಲ್ಲಿ ಮೊದಲ ಡಿಜಿಟಲ್ ಕ್ಯಾಮೆರಾ 1990ರಲ್ಲಿ ಮತ್ತು ಇಮೇಲ್ ಸೇವೆ 1995ರಲ್ಲಿ ಚಾಲ್ತಿಗೆ ಬಂತು.
ಸತ್ಯದ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ? ಮೋದಿಜೀ ಹೇಳಿದ್ದೇ ಸತ್ಯ.

1995ರಲ್ಲಿ ವಿಎಸ್‍ಎನ್‌ಎಲ್ ಸೇವೆ ಮೂಲಕ ಭಾರತದಲ್ಲಿ ಇಂಟರ್ನೆಟ್ ಸೇವೆ ಲಭ್ಯವಾಗಿತ್ತು. ಆದರೆ ಮೋದಿ 1987ರಲ್ಲಿಯೇ ಇಮೇಲ್ ಕಳಿಸುತ್ತಿದ್ದರು.
ಅವರು ಎಷ್ಟು ಬಡವರಾಗಿದ್ದರು ಎಂದರೆ 1987ರಲ್ಲಿಯೇ ಡಿಜಿಟಲ್ ಕ್ಯಾಮೆರಾ ಹೊಂದಿದ್ದರು, ಇನ್ನುಳಿದವರು 20 ವರ್ಷಗಳ ನಂತರವೇ ಇದನ್ನೆಲ್ಲಾ ಖರೀದಿಸಿದ್ದರು.
ಮೋದಿ ಭಾರತಕ್ಕೇ ಮುಜುಗರವನ್ನುಂಟು ಮಾಡಿದ್ದಾರೆ.

1995ರಲ್ಲಿ ಭಾರತಕ್ಕೆ ಇಂಟರ್ನೆಟ್ ಸೇವೆ ಬಂತು.1990ರಲ್ಲಿ ಡಿಜಿಟಲ್ ಕ್ಯಾಮೆರಾ.ಆದರೆ ಮೋದಿ 1988ರಲ್ಲಿ ಇಮೇಲ್ ಮೂಲಕ ಡಿಜಿಟಲ್ ಫೋಟೊ ಕಳಿಸಿದ್ದರು.

ಇದು ಮೊದಲ ಡಿಜಿಟಲ್ ಕ್ಯಾಮೆರಾ 1990ರಲ್ಲಿ ಮಾರುಕಟ್ಟೆಗೆ ಬಂದಿತ್ತು.1987ರಲ್ಲಿಯೇ ಮೋದಿ ಬಳಿ ಡಿಜಿಟಲ್ ಕ್ಯಾಮೆರಾ ಇತ್ತು.

1988ರಲ್ಲಿ ಮೋದಿಗೆ ಇಮೇಲ್ ಇತ್ತು. ಇಮೇಲ್ ಆವಿಷ್ಕಾರ ಮಾಡಿದ್ದು ಅವರೇನಾ?

ಮೋಡಿ ಬಡತನದಲ್ಲಿದ್ದರಾ? ಆದರೂ ಅವರ ಬಳಿ ಡಿಜಿಟಲ್ ಕ್ಯಾಮೆರಾ ಇತ್ತು.

ಮೋದಿ: ನಾನು ಬಡತನ ನೋಡಿದ್ದೇನೆ, ನಾನು ಬಡತನದಲ್ಲಿಯೇ ಬೆಳೆದಿದ್ದೆ.ಚಹಾ ಮಾರಿ ಸಂಸಾರ ಸಂಭಾಳಿಸಿದ್ದೆ.
ಮೋದಿ ಹೀಗೂ ಅಂತಾರೆ: 1988ರಲ್ಲಿ ನನ್ನ ಬಳಿ ಡಿಜಿಟಲ್ ಕ್ಯಾಮೆರಾ ಇತ್ತು. ಆಗ ದೇಶದಲ್ಲಿ ಕೆಲವೇ ಕೆಲವು ಮಂದಿಯಲ್ಲಿ ಇದು ಇತ್ತು.ನಾನು ಇಮೇಲ್ ಕೂಡಾ ಮಾಡುತ್ತಿದ್ದೆ.

ನೀವೆಲ್ಲರೂ ಒಂದು ವಿಷಯ ಬಿಟ್ಟಿದ್ದೀರಿ
ಮೋದಿ1988ರಲ್ಲಿಯೇ ಡಿಜಿಟಲ್ ಕ್ಯಾಮೆರಾ, ಇಮೇಲ್ ಬಳಸುತ್ತಿದ್ದರು.
1977ರಲ್ಲಿ ನನಗೆ ಮೋದಿ ಇಮೇಲ್ ಕಳುಹಿಸಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವಂತೆ ಹೇಳಿದ್ದರು

ಫೇಕು ಕಾಕಾ ಕೀ ಅಮರ್ ಕಹಾನಿಯಾ

ಭಾರತದಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಬರುವ ಮುನ್ನವೇ ಮೋದಿಯ ಬಳಿ ಅದು ಇತ್ತು ಅಂತಿದ್ದಾರೆ.ಉತ್ತಮ ಅಧಿಕಾರ ನೀಡಲು ವಿಫಲವಾದ ನಂತರ ಅವರು ಜನರನ್ನು ಮೋಸ ಮಾಡಲು ಸುಳ್ಳು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.