ದೆಹಲಿ:ಸಾಮಾಜಿಕ ಜಾಲ ತಾಣ ಸಂಸ್ಥೆ ಟ್ವಿಟರ್ ಆರ್ ಎಸ್ ಎಸ್ ವರಿಷ್ಟ ಮೋಹನ್ ಭಾಗವತ್ ಅವರ ವೈಯಕ್ತಿಕ ಟ್ವಿಟರ್ ಖಾತೆಗೆ ನೀಡಲಾಗಿದ್ದ ಬ್ಲೂ ಬ್ಯಾಡ್ಜ್ ರದ್ದುಪಡಿಸಿದೆ.
ಮುಂಜಾನೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಲ್ಲಿ ಇದೇ ರೀತಿಯ ಬದಲಾವಣೆ ಮಾಡಿತ್ತು. ಬಳಿಕ ವಿರೋಧ ವ್ಯಕ್ತವಾದ ಬಳಿಕ ಬ್ಲೂ ಬ್ಯಾಡ್ಜ್ ಸಕ್ರಿಯಗೊಳಿಸಿತ್ತು.
ಭಾಗವತ್ ಅವರ ಟ್ವಿಟರ್ ಖಾತೆಯನ್ನು 2019ರಮೇ ತಿಂಗಳಲ್ಲಿ ತೆರೆಯಲಾಗಿದೆ. ಕೇವಲ ಒಂದು ಟ್ವಿಟರ್ ಹ್ಯಾಂಡಲ್ ಅನ್ನು ಮಾತ್ರ ಮೋಹನ್ ಭಾಗವತ್ ತಮ್ಮ ಅಕೌಂಟ್ ಮೂಲಕ ಅನುಸರಿಸುತ್ತಿದ್ದು, 200,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ:ಟ್ವಿಟರ್ ವಿರುದ್ಧ ತಿರುಗಿ ಬೀಳಲು ನಾನಾ ಕಾರಣಗಳು
ಟ್ವಿಟರ್ ನಿಯಮಗಳ ಪ್ರಕಾರ, ಖಾತೆಯು ದೀರ್ಘಕಾಲದ ವರೆಗೆ ‘ನಿಷ್ಕ್ರಿಯ‘ವಾಗಿದ್ದರೆ, ಅದರ ಬ್ಯಾಡ್ಜ್ ಅನ್ನು ತೆಗೆದುಹಾಕಲಾಗುತ್ತದೆ.
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಟ್ವಿಟರ್ ಖಾತೆ ಬ್ಯಾಡ್ಜ್ ತೆಗೆದಾಗ ಟ್ವಿಟರ್ ಇದೇ ಕಾರಣ ನೀಡಿತ್ತು. 2020ರ ಜುಲೈನಿಂದ ವೆಂಕಯ್ಯನಾಯ್ಡು ಅವರ ಟ್ವಿಟರ್ ಖಾತೆ ನಿಷ್ಕ್ರಿಯವಾಗಿತ್ತು.
2019ರಲ್ಲಿಮೋಹನ್ ಭಾಗವತ್ ಅವರ ಟ್ವಿಟರ್ ಖಾತೆ ತೆರೆಯಲಾಗಿದೆಯಾದರೂ ಒಂದೇ ಒಂದು ಟ್ವೀಟ್ ಕೂಡ ಪೋಸ್ಟ್ ಆಗಿಲ್ಲ.
ಇವುಗಳನ್ನೂಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.