ADVERTISEMENT

ಪಶ್ಚಿಮ ಬಂಗಾಳ: ಇಬ್ಬರು ಬಾಂಗ್ಲಾ ಸ್ಮಗ್ಲರ್‌ಗಳನ್ನು ಹತ್ಯೆಗೈದ ಬಿಎಸ್‌ಎಫ್

ಪಿಟಿಐ
Published 17 ಡಿಸೆಂಬರ್ 2023, 13:08 IST
Last Updated 17 ಡಿಸೆಂಬರ್ 2023, 13:08 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಷ್ಣಗಂಜ್: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಇಬ್ಬರು ಬಾಂಗ್ಲಾ ಸ್ಮಗ್ಲರ್‌ಗಳನ್ನು ಬಿಎಸ್‌ಎಫ್ ಗುಂಡಿಕ್ಕಿ ಹತ್ಯೆಗೈದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷ್ಣಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದಪುರದ ಅಂತರರಾಷ್ಟ್ರೀಯ ಗಡಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಆರಂಭದಲ್ಲಿ ಬಾಂಗ್ಲಾದೇಶದ ಸ್ಮಗ್ಲರ್‌ಗಳ ಗುಂಪು ಹೊಸದಾಗಿ ನಿರ್ಮಿಸಲಾದ ಮುಳ್ಳುತಂತಿಯನ್ನು ಕತ್ತರಿಸಿ ಭಾರತದೊಳಗೆ ನುಸುಳಲು ಪ್ರಯತ್ನಿಸಿತು. ಆದರೆ ಪಡೆಯ ಗಸ್ತು ಘಟಕ ಗಾಳಿಯಲ್ಲಿ ಕೆಲವು ಸುತ್ತು ಗುಂಡು ಹಾರಿಸಿದಾಗ ಅವರು ಓಡಿಹೋದರು ಎಂದು ಬಿಎಸ್‌ಎಫ್‌ನ ಡಿಐಜಿ (ಪೂರ್ವ ಕಮಾಂಡ್) ಎಸ್‌.ಎಸ್ ಗುಲೇರಿಯಾ ಪಿಟಿಐಗೆ ತಿಳಿಸಿದ್ದಾರೆ.

ಸ್ವಲ್ಪ ಸಮಯದ ನಂತರ, ಬಿಎಸ್‌ಎಫ್‌ ಶೋಧನಾ ತಂಡ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಈ ಗುಂಪು ಅವರ ಮೇಲೆ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿತು. ಆತ್ಮರಕ್ಷಣೆಗಾಗಿ ಬಿಎಸ್‌ಎಫ್‌ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಬಾಂಗ್ಲಾದೇಶಿ ಸ್ಮಗ್ಲರ್‌ಗಳು ಮೃತಪಟ್ಟಿದ್ದಾರೆ ಅವರು ಹೇಳಿದರು.

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ಬಿಎಸ್‌ಎಫ್ ಮೃತದೇಹಗಳನ್ನು ಅವರಿಗೆ ಹಸ್ತಾಂತರಿಸಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಕ್ತಿನಗರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಹತ್ಯೆಗೀಡಾದ ಇಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.