ADVERTISEMENT

ಅಕ್ರಮ ಪ್ರವೇಶ | ಬಾಂಗ್ಲಾದೇಶದ ಇಬ್ಬರು ಪ್ರಜೆಗಳ ಗಡಿಪಾರು: ಅಸ್ಸಾಂ ಸಿಎಂ

ಪಿಟಿಐ
Published 25 ಆಗಸ್ಟ್ 2024, 5:07 IST
Last Updated 25 ಆಗಸ್ಟ್ 2024, 5:07 IST
<div class="paragraphs"><p>ಹಿಮಂತ ಬಿಸ್ವಾ ಶರ್ಮಾ</p></div>

ಹಿಮಂತ ಬಿಸ್ವಾ ಶರ್ಮಾ

   

(ಪಿಟಿಐ ಚಿತ್ರ)

ಗುವಾಹಟಿ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಬಾಂಗ್ಲಾದೇಶದ ಇಬ್ಬರು ಪ್ರಜೆಗಳನ್ನು ವಾಪಸ್ ಕಳುಹಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ADVERTISEMENT

ಬಾದರ್‌ಪುರ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಇಬ್ಬರು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವುದನ್ನು ಪತ್ತೆ ಹಚ್ಚಲಾಗಿತ್ತು.

ಬಿಎಸ್‌ಎಫ್ ಸಹಯೋಗದಲ್ಲಿ ಅಸ್ಸಾಂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರನ್ನು ಬಾಂಗ್ಲಾದೇಶದ ಮಾಡೆಲ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮಾಸುಮ್ ಖಾನ್ ಮತ್ತು ಢಾಕಾದ ಸೋನಿಯಾ ಅಖ್ತರ್ ಎಂದು ಗುರುತಿಸಲಾಗಿದೆ.

ಮಾಧೋಪುರ್ (ಬಾಂಗ್ಲಾದೇಶ)-ಅಗರ್ತಲಾ ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಿಸಿರುವ ಇವರು ಬೆಂಗಳೂರಿಗೆ ಹೋಗಲು ಯೋಜನೆ ಹಾಕಿದ್ದರು.

ಕಳೆದ ಒಂದು ತಿಂಗಳಲ್ಲಿ ಸರಿಯಾದ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಲು ಯತ್ನಿಸಿದ 30ಕ್ಕೂ ಅಧಿಕ ಬಾಂಗ್ಲಾದ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಜವಳಿ ಉದ್ಯಮದಲ್ಲಿ ಕೆಲಸ ಹುಡುಕಿಕೊಂಡು ಬೆಂಗಳೂರು ಹಾಗೂ ದಕ್ಷಿಣ ಭಾರತದ ನಗರಗಳಿಗೆ ಹೋಗಲು ಯತ್ನಿಸಿದ್ದಾರೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.