ನವದೆಹಲಿ: ಹಿಟ್ ಆ್ಯಂಡ್ ರನ್ ಪ್ರಕರಣವೊಂದರಲ್ಲಿ ಕಾರಿನ ಮೇಲೆ ಬಿದ್ದ ಇಬ್ಬರು ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಸುಮಾರು 20 ಮೀಟರ್ ದೂರ ಎಳೆದೊಯ್ದ ಘಟನೆ ನೈರುತ್ಯ ದೆಹಲಿಯಲ್ಲಿ ಶನಿವಾರ ನಡೆದಿದೆ.
‘ಟ್ರಾಫಿಕ್ ಪೊಲೀಸ್ ಸಿಬ್ಬಂದಿಯಿಬ್ಬರು ನಿಯಮ ಉಲ್ಲಂಘಿಸಿದವರನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಸಿಗ್ನಲ್ ಇದ್ದರೂ ವ್ಯಕ್ತಿಯೊಬ್ಬ ಕಾರನ್ನು ಚಲಾಯಿಸಿಕೊಂಡ ಮುಂದೆ ಬಂದಿದ್ದಾನೆ. ಕಾರನ್ನು ನಿಲ್ಲಿಸಲು ಸೂಚಿಸಿದರೂ ಆತ ನಿಲ್ಲಿಸಲಿಲ್ಲ. ಹೀಗಾಗಿ ಕಾರನ್ನು ತಡೆದು ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ಚಾಲಕ ಕಾರನ್ನು ಚಲಾಯಿಸಿದ್ದು, ಬಾನೆಟ್ ಮೇಲೆ ಬಿದ್ದಿದ್ದ ಸಿಬ್ಬಂದಿಯನ್ನು 20 ಮೀಟರ್‌ನಷ್ಟು ದೂರ ಎಳೆದೊಯ್ಯಲಾಗಿದೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ಬಂದಿದ್ದು, ನಮ್ಮ ತಂಡ ಸ್ಥಳಕ್ಕೆ ಧಾವಿಸಿತ್ತು. ಅಷ್ಟರಲ್ಲಿ ಕಾರಿನ ಚಾಲಕ ತಪ್ಪಿಸಿಕೊಂಡಿದ್ದ. ಗಾಯಗೊಂಡಿದ್ದ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಬ್ಬಂದಿಯನ್ನು ಕೊಲ್ಲುವ ಉದ್ದೇಶದಿಂದಲೇ ಎಳೆದೊಯ್ಯಲಾಗಿದೆ. ಹೀಗಾಗಿ ಕಾರು ಚಾಲಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರಿನ ಮಾಲೀಕನನ್ನು ಪತ್ತೆ ಮಾಡಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.