ADVERTISEMENT

NiPah Alert: ಕೇರಳದಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್‌ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2023, 12:58 IST
Last Updated 12 ಸೆಪ್ಟೆಂಬರ್ 2023, 12:58 IST
<div class="paragraphs"><p>ನಿಫಾ ವೈರಸ್‌ (ಪ್ರಾತಿನಿಧಿಕ ಚಿತ್ರ)</p></div>

ನಿಫಾ ವೈರಸ್‌ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್‌ ಇರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಕೇರಳ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲು ಕೇಂದ್ರದಿಂದ ನಿಪಾ ವೈರಸ್‌ ನಿರ್ವಹಣಾ ತಂಡವನ್ನು ಕಳುಹಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯಾ ತಿಳಿಸಿದ್ದಾರೆ.

ADVERTISEMENT

ನಿನ್ನೆ (ಸೆ.11) ಕೋಯಿಕ್ಕೋಡ್‌ನ ಖಾಸಗಿ ಆಸ್ಪತೆಯಲ್ಲಿ ಇಬ್ಬರು ಅಸಹಜವಾಗಿ ಮೃತಪಟ್ಟಿರುವುದರ ಬಗ್ಗೆ ವರದಿಯಾದ ಬಳಿಕ ನಿಪಾ ವೈರಸ್‌ ಇರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಶಂಕಿತರ ಪರೀಕ್ಷೆಯ ವರದಿಯಲ್ಲಿ ನಿಪಾ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: Kerala Nipah Alert: ಸಂಜೆಯೊಳಗೆ ಶಂಕಿತರ ಪರೀಕ್ಷೆ ವರದಿ; ಕೇರಳದ ಆರೋಗ್ಯ ಸಚಿವೆ

ವರದಿಯ ಪ್ರಕಾರ ವೈರಸ್‌ನಿಂದ ಮೊದಲ ಸಾವು ಆಗಸ್ಟ್‌ 30 ರಂದು ಮತ್ತು ಎರಡನೇ ಸಾವು ಸೋಮವಾರ (ಸೆ.11)ರಂದು ಸಂಭವಿಸಿದೆ.

ಈಗಾಗಲೇ ಕೇರಳ ಸರ್ಕಾರ ಕೋಯಿಕ್ಕೋಡ್‌ನಲ್ಲಿ ಕಂಟ್ರೋಲ್‌ ರೂಮ್‌ನ್ನು ಸ್ಥಾಪಿಸಿದ್ದು, ಮುಂಜಾಗೃತಾ ಕ್ರಮವಾಗಿ ಜನರಿಗೆ ಮಾಸ್ಕ್‌ ಧರಿಸಲು ಸೂಚನೆ ನೀಡಲಾಗಿದೆ. 

ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಭಯಪಡುವ ಅಗತ್ಯವಿಲ್ಲ, ವೈರಸ್‌ನಿಂದ ಮೃತಪಟ್ಟವರ ಸಂಪರ್ಕದಲ್ಲಿದ್ದವರಿಗೂ ಚಿಕಿತ್ಸೆ ನೀಡಲಾಗುತ್ತಿದೆ, ಜಾಗೃತರಾಗಿರಿ, ಆರೋಗ್ಯ ಇಲಾಖೆ ತೆಗೆದುಕೊಳ್ಳುವ ಕ್ರಮಗಳಿಗೆ ಸಹಕರಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇರಳ | ಎರಡು ಅಸಹಜ ಸಾವು; ನಿಫಾ ವೈರಸ್‌ ಶಂಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.