ವಾಷಿಂಗ್ಟನ್: ಭಾರತ ಮೂಲದ ಅಮೆರಿಕನ್ನರಾದ ಬೋಸ್ಟನ್‌ನ ನಿವಾಸಿ ಪದ್ಮಿನಿ ಪಿಳ್ಳೈ ಹಾಗೂ ನ್ಯೂಯಾರ್ಕ್‌ನ ನಳಿನಿ ಟಾಟಾ ಅವರನ್ನು 2024–25ನೇ ಸಾಲಿಗೆ ಶ್ವೇತಭವನದ ಫೆಲೊ ಆಗಿ ಆಯ್ಕೆ ಮಾಡಲಾಗಿದೆ.
ಅಸಾಧಾರಣ ಪ್ರತಿಭೆಯ 15 ಜನರನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರು ಶ್ವೇತಭವನದ ಹಿರಿಯ ಅಧಿಕಾರಿಗಳು, ಸಂಪುಟ ಕಾರ್ಯದರ್ಶಿ ಹಾಗೂ ಅತ್ಯುನ್ನತ ಹುದ್ದೆಯಲ್ಲಿ ಇರುವವರ ಜತೆಗೂಡಿ ಕಾರ್ಯನಿರ್ವಹಿಸುವರು.
‘ನಳಿನಿ ಅವರನ್ನು ಸಂಪುಟ ವ್ಯವಹಾರಗಳ ವಿಭಾಗ, ಪಿಳ್ಳೈ ಅವರನ್ನು ಸಾಮಾಜಿಕ ಭದ್ರತಾ ಆಡಳಿತ ವಿಭಾಗಕ್ಕೆ ನಿಯೋಜಿಸಲಾಗಿದೆ’ ಎಂದು ಶ್ವೇತಭವನವು ಈ ಕುರಿತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.