ADVERTISEMENT

Asian Prize: ಭಾರತದ ಇಬ್ಬರು ಲೇಖಕರು ಅಂತಿಮ ಸುತ್ತಿಗೆ ಆಯ್ಕೆ

ಪಿಟಿಐ
Published 1 ಜುಲೈ 2024, 12:51 IST
Last Updated 1 ಜುಲೈ 2024, 12:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಭಾರತದ ಇಬ್ಬರು ಲೇಖಕರ ಪುಸ್ತಕಗಳು ಏಷಿಯನ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.

ಭಾರತದ ಲೇಖಕರಾದ ಅರೇಫಾ ಟೆಹ್ಸಿನ್ ಅವರ ‘ವಿಚ್‌ ಇನ್‌ ದ ಪೀಪುಲ್‌ ಟ್ರೀ’, ಮರಿನಲಿನಿ ಹರ್ಚಂದ್ರೈ ಅವರ ‘ರೆಸ್ಕ್ಯುಯಿಂಗ್ ಎ ರಿವರ್‌ ಬ್ರೀಝ್‌’ ಮತ್ತು ನೇಪಾಳದಲ್ಲಿರುವ ಭಾರತ ಮೂಲದ ಲೇಖಕಿ ಸ್ಮೃತಿ ರವೀಂದ್ರ ಅವರ ‘ವುಮೆನ್‌ ವೂ ಕ್ಲೈಂಬೆಡ್‌ ಟ್ರೀಸ್‌’ ಪುಸ್ತಕಗಳು ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.

ADVERTISEMENT

ಇದರೊಂದಿಗೆ ನೈಜೀರಿಯ ಲೇಖಕ ಅಯೊಬಾಮಿ ಅಡೆಬಯೋಸ್‌ ಅವರ ಸ್ಪೆಲ್ಲ್ ಆಫ್‌ ಗುಡ್‌ ತಿಂಗ್ಸ್‌, ಪಾಕಿಸ್ತಾನದ ಸಫೀನಾ ಡ್ಯಾನೀಶ್‌ ಇಲಾಹಿ ಅವರ ಐಡಲ್‌ ಸ್ಟಾನ್ಸ್‌ ಆಫ್‌ ದ ಟಿಪ್ಲೆರ್‌ ಪಿಜನ್’ ಮತ್ತು ಶ್ರೀಲಂಕಾ–ಅಮೇರಿಕ ಲೇಖಕ ವಿ.ವಿ ಗಣೇಶ್‌ನಾಥನ್‌ ಅವರ ಬ್ರದರ್‌ ಲೆಸ್‌ ನೈಟ್ಸ್‌ ಪುಸ್ತಕ ಆಯ್ಕೆಯಾಗಿದೆ.

ಪುಸ್ತಕಗಳ ಆಯ್ಕೆಗೆ 7 ತಿಂಗಳ ಸುದೀರ್ಘ ಪ್ರಕ್ರಿಯೆ ನಡೆದಿದ್ದು, 13 ಗುಂಪು ಚರ್ಚೆಗಳನ್ನು ನಡೆಸಲಾಗಿತ್ತು. ಜಾಗತಿಕ ಮಟ್ಟದಲ್ಲಿನ ಅತ್ಯುತ್ತಮ 10 ಪುಸ್ತಕಗಳಲ್ಲಿ ಅಂತಿಮ ಸುತ್ತಿಗೆ 6 ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. 

ಪುಸ್ತಕ ಕ್ಲಬ್‌ಗಳ ಆಯ್ಕೆ, ಸಾರ್ವಜನಿಕರ ಅಭಿಪ್ರಾಯ ಮತ್ತು ಏಷಿಯನ್‌ ಸಮಿತಿಯ ಪರಿಶೀಲನೆಯ ಆಧಾರದಲ್ಲಿ ಅಂತಿಮವಾಗಿ ಮೂರು ಪುಸ್ತಕಗಳು ಆಯ್ಕೆಯಾಗಲಿದ್ದು, ನವೆಂಬರ್‌ 13ರಂದು ವಿಜೇತರ ಹೆಸರು ಘೋಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.