ಲಖನೌ: ಮಹಾಶಿವರಾತ್ರಿಯಂದು ಇಬ್ಬರು ಶಿವಭಕ್ತರು ಗಂಗಾ ನದಿಯಲ್ಲಿ ಮುಳುಗಿ ಸಾವಿಗೀಡಾರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.
ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಇಬ್ಬರು ಯಾತ್ರಿಕರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
'ಕನ್ವರಿಯಸ್' (ಭಗವಾನ್ ಶಿವ ಭಕ್ತರು) ಗುಂಪಿನ ಭಾಗವಾಗಿದ್ದ ಸುಬೋಧ್ ಕುಮಾರ್ (22) ಮತ್ತು ಅಮರ್ಜೀತ್ (21) ಮೃತ ಯಾತ್ರಾರ್ಥಿಗಳು. ಬುಧವಾರ ಇವರಿಬ್ಬರು ಉಶೈತ್‌ನ ಅಟೀನಾ ಗಂಗಾ ಘಾಟ್‌ಗೆ ಸ್ನಾನ ಮತ್ತು ಪವಿತ್ರ ಜಲ ಸಂಗ್ರಹಿಸಲು ಹೋಗಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಅವರು ಗುರುವಾರ ಶಿವನಿಗೆ ಪವಿತ್ರ ಜಲವನ್ನು ಅರ್ಪಿಸಬೇಕಿತ್ತು. ಆದರೆ, ಜಲ ಸಂಗ್ರಹಣೆಗೆ ತೆರಳಿದ್ದವರು ವಾಪಸ್ ಬರಲೇ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕುಮಾರ್ ಮತ್ತು ಅಮರ್ಜೀತ್ ಅವರು ರಾಜ್ಯದ ಮೈನ್‌ಪುರಿ ನಗರದ ನಿವಾಸಿಗಳಾಗಿದ್ದು, ಅವರ ಶವಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.