ADVERTISEMENT

ಕಾಂಗ್ರೆಸ್‌– ಅಕಾಲಿ ನಡುವೆ ಗಲಾಟೆ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:40 IST
Last Updated 10 ಫೆಬ್ರುವರಿ 2021, 16:40 IST

ಚಂಡೀಗಢ: ಇಲ್ಲಿನ ಮೊಗಾ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಅಕಾಲಿ ದಳದ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಮೊಗಾ ಜಿಲ್ಲಾ ಪೊಲೀಸ್‌ ಅಧಿಕಾರಿ ಬುಧವಾರ ತಿಳಿಸಿದ್ದಾರೆ.

ಫೆ. 14ರಂದು ನಡೆಯುವ ಪುರಸಭೆ ಚುನಾವಣೆಯ ಪ್ರಚಾರದಲ್ಲಿ ಎರಡೂ ಪಕ್ಷದವರು ತೊಡಗಿದ್ದರು. ಮಂಗಳವಾರ ರಾತ್ರಿ ಮೊಗಾ ಜಿಲ್ಲೆಯ ವಾರ್ಡ್‌ 9ರಲ್ಲಿ ಇವರ ನಡುವೆ ಗಲಾಟೆಯಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಅಕಾಲಿ ಕಾರ್ಯಕರ್ತರ ಮೇಲೆ ವಾಹನ ಹರಿಸಿದ್ದಾರೆ. ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಮತ್ತೊಬ್ಬರು ಲುಧಿಯಾನದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಐಪಿಸಿಯ 302 (ಕೊಲೆ) ಸೆಕ್ಷನ್‌ ಅಡಿಯಲ್ಲಿ ವಾರ್ಡ್ ನಂಬರ್ 9ರ ಕಾಂಗ್ರೆಸ್ ಅಭ್ಯರ್ಥಿಯ ಪತಿ ನರಿಂದರ್‌ಪಾಲ್ ಸಿಂಗ್ ಸಿಧು ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.