ಮದುರೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯ ವೇಳೆ ನಡೆದ ಪ್ರತ್ಯೇಕ ದುರ್ಘಟನೆಗಳಲ್ಲಿ ಹೋರಿ ಪಳಗಿಸುವ ವ್ಯಕ್ತಿ ಸೇರಿದಂತೆ ಇಬ್ಬರು ಸೋಮವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಲಮೇಡುವಿನ ಹೋರಿ ಪಳಗಿಸುವ ವ್ಯಕ್ತಿ ಅರವಿಂದರಾಜ್ (26) ಮತ್ತು ಪುದುಕೋಟೈ ಜಿಲ್ಲೆಯಲ್ಲಿ ಪ್ರೇಕ್ಷಕ ಎಂ. ಅರವಿಂದ್ (25) ಎಂಬುವವರು ಹೋರಿ ತಿವಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಮೃತರ ಕುಟುಂಬಗಳಿಗೆ ತಲಾ ₹3ಲಕ್ಷ ಪರಿಹಾರ ಘೋಷಿಸಿದ್ದಾರೆ.
ಅವನಿಯಪುರಂನಲ್ಲಿ ನಡೆದ ಜಲ್ಲಿಕಟ್ಟು ವೇಳೆ ಹೋರಿ ಪಳಗಿಸುವವರು, ಮಾಲೀಕರು ಸೇರಿದಂತೆ 75 ಮಂದಿ ಹಾಗೂ ಪಲಮೇಡುವಿನಲ್ಲಿ 34 ಮಂದಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.