ಬರೇಲಿ(ಉತ್ತರ ಪ್ರದೇಶ): ‘ತಮಿಳುನಾಡಿನ ಅರಿನಗರ ಅಣ್ಣ ಜೈವಿಕ ಉದ್ಯಾನದಲ್ಲಿ ಎರಡು ಸಿಂಹಿಣಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ವೇಳೆ ಸಿಂಹವೊಂದರಲ್ಲಿ ಡಿಸ್ಟೆಂಪರ್ ವೈರಸ್ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ’ ಎಂದುಉತ್ತರ ಪ್ರದೇಶದಲ್ಲಿರುವಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್‌ಐ) ಗುರುವಾರ ತಿಳಿಸಿದೆ.
‘ಈ ಜೈವಿಕ ಉದ್ಯಾನದಿಂದ ನಾಲ್ಕು ಹುಲಿಗಳ ಮಾದರಿ ಸೇರಿದಂತೆ ಒಟ್ಟು ಏಳು ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಒಂದು ಸಿಂಹಿಣಿಯಲ್ಲಿ ಕೋವಿಡ್ ಮತ್ತು ಡಿಸ್ಟೆಂಬರ್ ವೈರಸ್ ಪತ್ತೆಯಾಗಿದೆ’ ಎಂದು ತಿಳಿಸಿದೆ.
‘ಇನ್ನೊಂದು ಸಿಂಹಣಿಯಲ್ಲಿ ಕೋವಿಡ್ ದೃಢಪಟ್ಟಿದೆ. ಮತ್ತೊಂದು ಸಿಂಹವು ಡಿಸ್ಟೆಂಬರ್ ವೈರಸ್‌ಗೆ ತುತ್ತಾಗಿದೆ. ಆದರೆ ನಾಲ್ಕು ಹುಲಿಗಳಿಗೆ ಯಾವುದೇ ಸೋಂಕು ತಗುಲಿಲ್ಲ’ ಎಂದು ಐವಿಆರ್‌ವಿ ಜಂಟಿ ನಿರ್ದೇಶಕ ಕೆ.ಪಿ ಸಿಂಗ್ ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.