ADVERTISEMENT

ವಯನಾಡ್ ಸಂತ್ರಸ್ತರಿಗೆ ಟೌನ್‌ಶಿಪ್ ನಿರ್ಮಿಸಲು 2 ಜಾಗಗಳು ಅಂತಿಮ: ಕೇರಳ ಸಚಿವ

ಪಿಟಿಐ
Published 30 ಆಗಸ್ಟ್ 2024, 13:37 IST
Last Updated 30 ಆಗಸ್ಟ್ 2024, 13:37 IST
<div class="paragraphs"><p>ದುರಂತ ನಡೆದ ಸ್ಥಳ</p></div>

ದುರಂತ ನಡೆದ ಸ್ಥಳ

   

– ರಾಯಿಟರ್ಸ್ ಚಿತ್ರ

ತಿರುವನಂತಪುರ: ವಯನಾಡ್‌ ಭೂಕುಸಿತ ದುರಂತ ಸಂತ್ರಸ್ತರಿಗೆ ‘ಸಮುದಾಯ ಜೀವನ’ (community living) ಮಾದರಿಯ ಟೌನ್‌ಶಿಪ್ ನಿರ್ಮಾಣ ಮಾಡಲು ಎರಡು ಸ್ಥಳಗಳನ್ನು ಸರ್ಕಾರ ಅಂತಿಮಗೊಳಿಸಿದೆ ಎಂದು ಸಚಿವ ಕೆ. ರಾಜನ್ ಶುಕ್ರವಾರ ಹೇಳಿದ್ದಾರೆ.

ADVERTISEMENT

‘ಭೂಕುಸಿತ ಸಂತ್ರಸ್ತರ ಸಂಪೂರ್ಣ ಪುನರ್ವಸತಿಗಾಗಿ ನಾವು ಕಲ್ಪೆಟ್ಟಾ ಹಾಗೂ ಕೊಟ್ಟಪಾಡಿಯಲ್ಲಿ ಎರಡು ಸ್ಥಳಗಳನ್ನು ಸಮುದಾಯ ಜೀವನ ಮಾದರಿಯ ಟೌನ್‌ಶಿಪ್‌ ನಿರ್ಮಾಣ ಮಾಡಲು ಗುರುತಿಸಿದ್ದೇವೆ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಮನೆಗಳನ್ನು ಮಾತ್ರ ನೀಡಿ ನಾವು ಅವರಿಗೆ ಪುನರ್ವಸತಿ ಕಲ್ಪಿಸುವುದಿಲ್ಲ. ಬದಲಾಗಿ ಅವರಿಗೆ ಉದ್ಯೋಗ ಹಾಗೂ ಶಿಕ್ಷಣ ನೀಡಿ ಅವರಿಗೆ ಸಮಗ್ರ ಜೀವನ ನೀಡಲು ಉದ್ದೇಶಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘ಆಸ್ಪತ್ರೆ, ಸಾರ್ವಜನಿಕ ವ್ಯವಸ್ಥೆ, ಸಮುದಾಯ ಕೇಂದ್ರ, ಪ್ರಾಥಮಿಕ ಶಾಲೆ ಸೇರಿ ಸಂಪೂರ್ಣ ಸೌಲಭ್ಯಗಳು ಇರಲಿವೆ’ ಎಂದು ಹೇಳಿದ್ದಾರೆ.

ದುರಂತ ಸಂಭವಿಸಿದ ಸ್ಥಳದಿಂದ ಕೊಟ್ಟಪಾಡಿ 11 ಕಿ.ಮೀ ಹಾಗೂ ಕಲ್ಪೆಟ್ಟಾ 35 ಕಿ.ಮೀ ದೂರದಲ್ಲಿದೆ. ಕಲ್ಪೆಟ್ಟಾ ವಯನಾಡ್ ಜಿಲ್ಲೆಯ ಕೇಂದ್ರ ಸ್ಥಾನವೂ ಹೌದು.

ಜುಲೈ 30ರಂದು ನಡೆದ ಈ ದುರಂತದಲ್ಲಿ ಪುಂಜಿರಿಮ್ಟಂ, ಚೂರಲ್‌ಮಲ ಹಾಗೂ ಮುಂಡಕ್ಕೈ ಎನ್ನುವ ಮೂರು ಗ್ರಾಮಗಳು ನಾಮಾವಾಶೇಷವಾಗಿದ್ದವು. 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.