ADVERTISEMENT

ಎನ್‌ಆರ್‌ಸಿ: ಅಸ್ಸಾಂನಲ್ಲಿ 19 ಲಕ್ಷ ಜನ ಹೊರಗೆ

ಪಿಟಿಐ
Published 31 ಆಗಸ್ಟ್ 2019, 19:44 IST
Last Updated 31 ಆಗಸ್ಟ್ 2019, 19:44 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಗುವಾಹಟಿ: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ರಾಜ್ಯದ 19.06 ಲಕ್ಷ ಜನರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ.

ಏನೇ ಆಕ್ಷೇಪಗಳಿದ್ದರೂ ‘ವಿದೇಶಿಯರ ನ್ಯಾಯಮಂಡಳಿ’ಗೆ ಅರ್ಜಿ ಸಲ್ಲಿಸುವಂತೆ ಈ ಜನರಿಗೆ ಸೂಚಿಸಲಾಗಿದೆ. ಆದರೆ ನ್ಯಾಯಮಂಡಳಿ ಇವರನ್ನು ‘ವಿದೇಶಿಯರು’ ಎಂದು ಘೋಷಿಸುವವರೆಗೂ, ಅಂತಹವರನ್ನು ಬಂಧಿಸುವುದಿಲ್ಲ ಎಂದು ಸರ್ಕಾರವು ಭರವಸೆ ನೀಡಿದೆ.

ಈ ಹಿಂದೆ ಪ್ರಕಟಿಸಲಾಗಿದ್ದ ನಾಲ್ಕು ಕರಡು ಪಟ್ಟಿಗಳಲ್ಲಿ ಇದ್ದವರಲ್ಲಿ ಹಲವರನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ. ಆಗ ಪಟ್ಟಿಯಲ್ಲಿ ಇಲ್ಲದಿದ್ದವರ ಹೆಸರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ. ಅಸ್ಸಾಂನ ಆಡಳಿತ ಪಕ್ಷ, ವಿರೋಧ ಪಕ್ಷಗಳ ನಾಯಕರ ಹೆಸರೂ ಪಟ್ಟಿಯಲ್ಲಿ ಇಲ್ಲ. ಎನ್‌ಆರ್‌ಸಿ ಪರಿಷ್ಕರಣೆಗೆ ಆಗ್ರಹಿಸಿದ ಸಂಘಟನೆಗಳೂ ಅಂತಿಮ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.