ADVERTISEMENT

ಕಾಜಿರಂಗ ರಾಷ್ಟ್ರೀಯ ಉದ್ಯಾನ: ಎರಡು ಹೊಸ ಪ್ರಾಣಿಗಳು ಪ್ರತ್ಯಕ್ಷ

ಪಿಟಿಐ
Published 28 ಜನವರಿ 2024, 13:23 IST
Last Updated 28 ಜನವರಿ 2024, 13:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗುವಾಹಟಿ: ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ‘’ಬಿಂಟುರಾಂಗ್’ ಅಥವಾ ‘ಬೇರ್‌ಕ್ಯಾಟ್’ (ಪುನುಗು ಬೆಕ್ಕು ಪ್ರಬೇಧಕ್ಕೆ ಸೇರಿದ ಪ್ರಾಣಿ) ಮತ್ತು ನೀರು ನಾಯಿ ಹೊಸದಾಗಿ ಪತ್ತೆಯಾಗಿವೆ. ಈ ಮೂಲಕ ಹುಲಿ ಸಂರಕ್ಷಿತ ಅರಣ್ಯದಲ್ಲಿ ಈವರೆಗೆ ಒಟ್ಟಾರೆ 37 ಸಸ್ತನಿಗಳು ರಕ್ಷಣೆ ಪಡೆದಂತಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ನೀರು ಹಕ್ಕಿಗಳನ್ನು ಸಮೀಕ್ಷೆ ಮಾಡುವ ವೇಳೆ ಈ ಎರಡು ಪ್ರಾಣಿಗಳು ಕಂಡುಬಂದಿವೆ ಎಂದು ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ತಿಳಿಸಿದ್ದಾರೆ. 

ADVERTISEMENT

ಭಾರತದಲ್ಲಿ ಪುನುಗು ಬೆಕ್ಕಿನ ಪ್ರಬೇಧಕ್ಕೆ ಸೇರಿದ ಅತಿದೊಡ್ಡ ಪ್ರಾಣಿ ಎಂದು ಗುರುತಿಸಲಾಗುವ ಬೇರ್‌ಕ್ಯಾಟ್ ಅನ್ನು ಕಾಡುಪ್ರಾಣಿಗಳ ರಕ್ಷಣೆ ಕಾಯ್ದೆ-1972ರಲ್ಲಿ ಸೇರಿಸಲಾಗಿದೆ. ಪಕ್ಷಿಗಳ ಸಮೀಕ್ಷೆ ನಡೆಸುವ ವೇಳೆ ಚಿರಂತನು ಸೈಕಿಯಾ ಎಂಬುವವರ ಕ್ಯಾಮೆರಾದಲ್ಲಿ ಬೇರ್‌ಕ್ಯಾಟ್ ಸೆರೆಯಾಗಿದೆ. ಆಗ್ನೇಯ ಭಾರತ ಮತ್ತು ದಕ್ಷಿಣ ಭಾಗದಲ್ಲಿ ಕಂಡಬರುವ ಈ ಪ್ರಾಣಿಯು ರಾತ್ರಿ ಸಂಚಾರಿಸುವ ಕಾರಣಕ್ಕೆ ಅಷ್ಟು ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ ಎಂದು ಘೋಷ್ ಹೇಳಿದ್ದಾರೆ.

ಅಸ್ಸಾಂ ಅರಣ್ಯ ಇಲಾಖೆಯೊಂದಿಗೆ ಭಾರತದ ವನ್ಯಜೀವಿ ಸಂಸ್ಥೆಯು ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ವೇಳೆ ಪೂರ್ವ ಅಸ್ಸಾಂ ವನ್ಯಜೀವಿ ಪ್ರದೇಶದ ವಿಭಾಗೀಯ ಅರಣ್ಯಾಧಿಕಾರಿ ಅರುಣ್ ವಿಗ್ನೇಶ್ ಅವರ ಕ್ಯಾಮೆರಾದಲ್ಲಿ ನೀರುನಾಯಿ ಸೆರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.