ADVERTISEMENT

ಮಹಾರಾಷ್ಟ್ರ: ಮಹಾಯುತಿ ಸರ್ಕಾರದಿಂದ ನಾಳೆ ಬಜೆಟ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:55 IST
Last Updated 27 ಜೂನ್ 2024, 15:55 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಬಳಿಕ ಏಕನಾಥ ಶಿಂದೆ ನೇತೃತ್ವದ ಮಹಾಯುತಿ (ಎನ್‌ಡಿಎ) ಸರ್ಕಾರವು ಶುಕ್ರವಾರ ಜನಪರ ಬಜೆಟ್‌ ಮಂಡಿಸುವುದಾಗಿ ಹೇಳಿದೆ.

ಇದರ ಬೆನ್ನಲ್ಲೇ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ವಿರೋಧ ಪಕ್ಷಗಳ ಒಕ್ಕೂಟ ಮಹಾ ವಿಕಾಸ್‌ ಅಘಾಡಿ (ಎಂವಿಸಿ), ಸರ್ಕಾರವನ್ನು ಒತ್ತಾಯಿಸಿದೆ.

ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಗುರುವಾರದಿಂದ ಆರಂಭವಾಗಿದ್ದು, ಶುಕ್ರವಾರ ಬಜೆಟ್‌ ಮಂಡನೆಯಾಗಲಿದೆ.

ADVERTISEMENT

ಮರಾಠ– ಒಬಿಸಿ ಮೀಸಲು, ಕೃಷಿ ಸಂಕಷ್ಟದ ವಿಷಯಗಳ ಕಾರಣ ಏಕನಾಥ್‌ ಶಿಂದೆ– ದೇವೇಂದ್ರ ಫಡಣವೀಸ್‌– ಅಜಿತ್‌ ಪವಾರ್ ಅವರ ಸರ್ಕಾರಕ್ಕೆ ಲೋಕಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಉಂಟಾಗಿತ್ತು. ವಿರೋಧ ಪಕ್ಷಗಳ ಒಕ್ಕೂಟವು ರಾಜ್ಯದ 48 ಲೋಕಸಭಾ ಕ್ಷೇತ್ರಗಳ ಪೈಕಿ 31ರಲ್ಲಿ ಗೆಲುವು ಸಾಧಿಸಿ ಬಲ ವೃದ್ಧಿಸಿಕೊಂಡಿವೆ.

‘ನಾವು ಎಲ್ಲರನ್ನು ಒಳಗೊಳ್ಳುವ ಬಜೆಟ್‌ ಅನ್ನು ಮಂಡಿಸುತ್ತೇವೆ’ ಎಂದು ಮುಖ್ಯಮಂತ್ರಿ ಶಿಂದೆ ಹೇಳಿದ್ದಾರೆ.

ಹಣಕಾಸು ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಪವಾರ್‌ ಅವರು ಬಜೆಟ್‌ ಮಂಡಿಸಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕೃಷಿ ಸಾಲವನ್ನು ಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.