ADVERTISEMENT

ಕೇಂದ್ರ, ಮಹಾರಾಷ್ಟ್ರದ್ದು ‘ಸೋರಿಕೆ’ ಸರ್ಕಾರಗಳು: ಠಾಕ್ರೆ ವ್ಯಂಗ್ಯ

ಪಿಟಿಐ
Published 27 ಜೂನ್ 2024, 20:22 IST
Last Updated 27 ಜೂನ್ 2024, 20:22 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮತ್ತು ಅಯೋಧ್ಯೆ ರಾಮಮಂದಿರ ಸೋರುತ್ತಿರುವುದನ್ನು ಗುರಿಯಾಗಿಸಿಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರದ ಮಹಾಯುತಿ ಸರ್ಕಾರವನ್ನು ಟೀಕಿಸಿರುವ ಶಿವ ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ‘ಎರಡೂ ಸೋರಿಕೆ ಸರ್ಕಾರಗಳು’ ಎಂದು ವ್ಯಂಗ್ಯವಾಡಿದರು.

ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುರುವಾರದಿಂದ ಆರಂಭವಾಗಿರುವ ವಿಧಾನಸಭೆಯ ಮುಂಗಾರು ಅಧಿವೇಶನವು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರ್ಕಾರದ ‘ಬೀಳ್ಕೊಡುಗೆ’ ಅಧಿವೇಶನ’ ಎಂದು ಹೇಳಿದರು. 

‘ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ರೈತರ ಸಾಲ ಮನ್ನಾ ಮಾಡಬೇಕು’ ಎಂದೂ ಅವರು ಆಗ್ರಹಿಸಿದರು. 

ADVERTISEMENT

ಇದಕ್ಕೂ ಮೊದಲು, ಶಿವಸೇನಾ (ಯುಬಿಟಿ), ಕಾಂಗ್ರೆಸ್‌ ಮತ್ತು ಎನ್‌ಸಿಪಿ (ಎಸ್‌ಪಿ) ಒಳಗೊಂಡ ಮಹಾ ವಿಕಾಸ್‌ ಅಘಾಡಿಯ (ಎಂವಿಎ) ಶಾಸಕರು ಶಾಸನಸಭೆಯ ಸಂಕೀರ್ಣದ ಆವರಣದಲ್ಲಿ ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಟೀಕಿಸಲು ನೀಟ್‌ ಅಕ್ರಮ ಮತ್ತು ಅಯೋಧ್ಯೆ ರಾಮ ಮಂದಿರ ಸೋರುತ್ತಿದೆ ಎಂಬ ಅಲ್ಲಿನ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಹೇಳಿಕೆಯನ್ನು ಬಳಸಿಕೊಂಡ ಠಾಕ್ರೆ, ‘ಕೇಂದ್ರ ಮತ್ತು ರಾಜ್ಯದಲ್ಲಿರುವುದು ಸೋರಿಕೆ ಸರ್ಕಾರಗಳು. ಯಾಕೆಂದರೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ರಾಮಮಂದಿರದ ಗರ್ಭಗುಡಿಯೂ ಸೋರುತ್ತಿದೆ. ಅವರಿಗೆ ನಾಚಿಕೆ ಎಂಬುದೇ ಇಲ್ಲ’ ಎಂದು ಕಿಡಿಕಾರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.