ADVERTISEMENT

ಕಾಶ್ಮೀರ ಕಣಿವೆಗೆ ಸಂಪರ್ಕ ರೈಲು ಮಾರ್ಗ ವರ್ಷಾಂತ್ಯಕ್ಕೆ ಪೂರ್ಣ: ಅಶ್ವಿನಿ ವೈಷ್ಣವ

ಪಿಟಿಐ
Published 25 ಮಾರ್ಚ್ 2023, 19:15 IST
Last Updated 25 ಮಾರ್ಚ್ 2023, 19:15 IST
ಅಶ್ವಿನಿ ವೈಷ್ಣವ್‌
ಅಶ್ವಿನಿ ವೈಷ್ಣವ್‌   

ಶ್ರೀನಗರ: ಕಾಶ್ಮೀರ ಕಣಿವೆಗೆ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುವ ಉಧಂಪುರ–ಬನಿಹಾಲ್ ರೈಲು ಮಾರ್ಗ ಈ ವರ್ಷ ಪೂರ್ಣಗೊಳ್ಳ ಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಶನಿವಾರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಡಿಸೆಂಬರ್‌ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ರೈಲುಗಳ ಸಂಚಾರಕ್ಕೆ ಮುಕ್ತವಾಗಲಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ಉಧಂಪುರ–ಶ್ರೀನಗರ–ಬರಾಮುಲ್ಲಾ ರೈಲು ಮಾರ್ಗ ಪ್ರಗತಿಯಲ್ಲಿದ್ದು, ಆ ಮಾರ್ಗವೂ ಪೂರ್ಣಗೊಳ್ಳಲಿದೆ ಎಂದು
ತಿಳಿಸಿದ್ದಾರೆ.

ಈ ರೈಲು ಮಾರ್ಗದಲ್ಲಿ ಸಂಚರಿಸಲು ವಿಶೇಷವಾಗಿ ವಂದೇ ಭಾರತ್‌ ರೈಲನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು
ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.