ಧರ್ಮಪುರಿ: ‘ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಈಗಿರುವ ಸ್ಥಾನಮಾನ ಹೊಂದಲು ಯಾವುದೇ ತ್ಯಾಗ ಮಾಡಿಲ್ಲ. ಆಡಳಿತಾರೂಢ ಡಿಎಂಕೆ ಪಕ್ಷವು ‘ಕುಟುಂಬ ರಾಜಕೀಯ’ದಲ್ಲಿ ತೊಡಗಿದೆ’ ಎಂದು ಎಐಎಡಿಎಂಕೆ ಆರೋಪಿಸಿದೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮುನುಸಾಮಿ, ‘ಉದಯನಿಧಿ ಕುಟುಂಬದವರು ರಾಜಕಾರಣದ ಸಂಕೇತದಂತಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಯಾವುದೇ ಸಂದರ್ಭದಲ್ಲಿ ಅವರ ಹುದ್ದೆಯಿಂದಲೇ ಕಿತ್ತೊಗೆಯಬಹುದಾಗಿದೆ. ನಟ ವಿಜಯ್ ಅವರು ಈಗಷ್ಟೇ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ’ ಎಂದು ತಿಳಿಸಿದರು.
ಪಕ್ಷವನ್ನು 70 ವರ್ಷದ ಇ. ಪಳನಿಸ್ವಾಮಿ ಮುಂದುವರಿಸುತ್ತಿದ್ದು, ಯುವ ನಾಯಕರಿಗೆ ಪಕ್ಷದಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಉದಯನಿಧಿ ಸ್ಟಾಲಿನ್ ಯಾರು? ಅಜ್ಜ, ತಂದೆ ಹಾಗೂ ಮಗ ರಾಜಕೀಯದಲ್ಲಿದ್ದು, ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಆತ ಆ ಹುದ್ದೆಗೆ ಬರಲು ಯಾವುದೇ ತ್ಯಾಗ ಮಾಡಿಲ್ಲ’ ಎಂದು ತಿಳಿಸಿದರು.
‘ಎಐಎಡಿಎಂಕೆ ಪ್ರಜಾಪ್ರಭುತ್ವ ಆಧರಿತ ಪಕ್ಷವಾಗಿದ್ದು, ಕುಟುಂಬ ರಾಜಕಾರಣಕ್ಕೆ ಆಸ್ಪದ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.